ಅಸ್ಸಾಂ ನ ಕಾಮಾಕ್ಯ ಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ, ಪೂಜೆ ಸಲ್ಲಿಕೆ

ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.8 ರಂದು ಅಸ್ಸಾಂ ಗೆ ಭೇಟಿ ನೀಡಿದ್ದು 4 ಸಾರ್ವಜನಿಕ ಸಮಾವೇಶಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅಸ್ಸಾಂ ನ ಕಾಮಾಕ್ಯ ಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ
ಅಸ್ಸಾಂ ನ ಕಾಮಾಕ್ಯ ಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ

ಗುವಾಹಟಿ: ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.8 ರಂದು ಅಸ್ಸಾಂ ಗೆ ಭೇಟಿ ನೀಡಿದ್ದು 4 ಸಾರ್ವಜನಿಕ ಸಮಾವೇಶಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶಕ್ಕೂ ಮುನ್ನ ಅಸ್ಸಾಂ ನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿಲಿದ್ದಾರೆ.
ಪೂಜೆ ಬಳಿಕ ರಹಾ, ರಂಗಿಯಾ, ಸೊರ್ಭೋಗ್, ಗುವಾಹಟಿಗಳಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅಸ್ಸಾಂ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಹಲವು ವರ್ಷಗಳ ಬಳಿಕ ನವರಾತ್ರಿಯ ಮೊದಲ ದಿನದಂದು ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ಕಾಮಾಕ್ಯ ಮಾತೆಗೆ ಪೂಜೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ತಿಳಿಸಿದ್ದಾರೆ.  ಇದೇ ವೇಳೆ ಯುಗಾದಿಯಂದು ಮಹಾರಾಷ್ಟ್ರದಲ್ಲಿ ಆಚರಿಸಲಾಗುವ ಗುಡಿ ಪಾಡ್ವಾ ಆಚರಣೆಗೂ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com