ಅಸ್ಸಾಂ ರೈಫಲ್ಸ್ ಕ್ಯಾಂಪ್ ಬಳಿ ಐಇಡಿ ಸ್ಫೋಟ: 1 ಸಾವು, 3 ಗಾಯ

ಅಸ್ಸಾಂ ರೈಫಲ್ಸ್ ಕ್ಯಾಂಪ್ ಬಳಿ ಐಇಡಿ ಸ್ಫೋಟಗೊಂಡ ಪರಿಣಾಮ ಓರ್ವ ಜವಾನ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ...
ಐಇಡಿ ಸ್ಫೋಟ
ಐಇಡಿ ಸ್ಫೋಟ

ಇಂಫಾಲ್: ಅಸ್ಸಾಂ ರೈಫಲ್ಸ್ ಕ್ಯಾಂಪ್ ಬಳಿ ಐಇಡಿ ಸ್ಫೋಟಗೊಂಡ ಪರಿಣಾಮ ಓರ್ವ ಜವಾನ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ಕುಮಾನ್ ಲಂಪಕ್ ಸ್ಪೋರ್ಟ್ಸ್ ಕಾಂಪ್ಲೆಂಕ್ ಬಳಿ ಕಳೆದ ರಾತ್ರಿ 7.20 ಸುಮಾರಿಗೆ ಐಇಡಿ ಸ್ಫೋಟಗೊಂಡಿದ್ದು, 35 ಅಸ್ಸಾಂ ರೈಫಲ್ಸ್ ನ ಜವಾನ್ ಮೃತಪಟ್ಟಿದ್ದಾರೆ. ಇನ್ನು ಸ್ಫೋಟದಲ್ಲಿ ಓರ್ವ 31ನೇ ಅಸ್ಸಾಂ ರೈಫಲ್ಸ್ ಹಾಗೂ ಇಬ್ಬರು 17ನೇ ಅಸ್ಸಾಂ ರೈಫಲ್ಸ್ ನ ಜವಾನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟದ ಬಳಿಕ ಗಂಭೀರವಾಗಿ ಗಾಯಗೊಂಡ ಮೂವರನ್ನು ಸ್ಥಳೀಯ ಆರ್ಐಎಂಎಸ್ ಆಸ್ಪತ್ರೆ ಮತ್ತು ಶಿಜಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಟ್ರಾನ್ಸಿಟ್ ಕ್ಯಾಂಪ್ ಬಳಿ ಅಸ್ಸಾಂ ರೈಫಲ್ಸ್ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಅವರನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com