ಪೋಷಕರಿಗೆ ಚೂರಿ ಇರಿದು ಬಳಿಕ ಆತ್ಮಹತ್ಯೆಗೆ ಶರಣಾದ ನಿರುದ್ಯೋಗಿ ಯುವಕ

ನಿರುದ್ಯೋಗಿ ಐಟಿಐ ಪದವಿಧರ ಯುವಕನೊಬ್ಬ ಪೋಷಕರು ಸೇರಿ ಕುಟುಂಬದ ಐವರು ಸದಸ್ಯರಿಗೆ ಚೂರಿದು ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಕಾಸರಗೋಡಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಕಾಸರಗೋಡು: ಐಟಿಐ ಮಾಡಿದ್ದ ನಿರುದ್ಯೋಗಿ ಯುವಕನೊಬ್ಬ ಪೋಷಕರು ಸೇರಿ ಕುಟುಂಬದ ಐವರು ಸದಸ್ಯರಿಗೆ ಚೂರಿದು ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಕಾಸರಗೋಡಿನ ನೆಕ್ರಾಜೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಅಶ್ವಿನ್ ಕಲ್ಲುರಾಯ(24) ಕುಟುಂಬಸ್ಥರಿಗೆ ಚೂರಿದು ನಂತರ ತಾನೂ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ರಜೆ ದಿನಗಳನ್ನು ಕಳೆಯುವ ಸಲುವಾಗಿ ಅಶ್ನಿನ್ ಹಾಗೂ ಆತನ ಪೋಷಕರು ಕೊಯಮತ್ತೂರಿನಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದಾರೆ. ಅಶ್ವಿನ್ ವರ್ತನೆಯಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ಆತನ ಪೋಷಕರು ಆಸ್ಪತ್ರೆಗೆ ಕರೆದೊಯ್ಯಲು ಚಿಂತಿಸಿದ್ದರು.

ಅಷ್ಟರಲ್ಲಾಗಲೇ ಅಶ್ವಿನ್ ಇದ್ದಕ್ಕಿದ್ದಂತೆ ತನ್ನ ಅಜ್ಜಿ ಸುಗುಣಮ್ಮ (74) ಮೇಲೆ ಚಾಕುವನ್ನು ಹಿಡಿದು ದಾಳಿ ಮಾಡಿದ್ದಾರೆ. ನಂತರ ಚಿಕ್ಕಮ್ಮ ವನಜಾಕ್ಷಿ, ತಾಯಿ ಲತಾ ಹಾಗೂ ಸಂಬಂಧಿಯಾದ ಸುಮಾ ಎಂಬುವವರ ಮೇಲೂ ದಾಳಿ ಮಾಡಿದ್ದಾನೆ.

ಅಶ್ವಿನ್ ಹಲ್ಲೆ ನಡೆಸುತ್ತಿರುವುದನ್ನು ನೋಡಿದ ಆತನ ತಂದೆ ಶ್ರೀಹರಿಯವರು ತಡೆಯಲು ಹೋಗಿದ್ದಾರೆ. ಈ ವೇಳೆ ಅವರ ಮೇಲೂ ದಾಳಿ ಮಾಡಿದ್ದಾನೆ. ನಂತರ ಶ್ರೀಹರಿಯವರು ಅಶ್ವಿನ್ ನ್ನು ಹೊರಗೆ ಎಳೆದುಕೊಂಡು ಹೋಗಿದ್ದಾರೆ. ಇದನ್ನು ಕಂಡ ನೆರೆಮನೆಯ ನಾರಾಯಣ ಎಂಬುವವರು ಪೊಲೀಸರಿಗೆ ಹಾಗೂ ಆ್ಯಂಬುಲೆನ್ಸ್ ಸುದ್ದಿ ಮುಟ್ಟಿಸಿದ್ದಾರೆ.

ಇದಾದ ಕೆಲವೇ ಗಂಟೆಗಳಲ್ಲಿ ಅಶ್ವಿನ್ ಮನೆಯ ಹತ್ತಿರವಿರುವ ಮರವೊಂದಕ್ಕೆ ನೇಣಿಗೆ ಶರಣಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೀಗ ಹಲ್ಲೆಗೊಳಗಾದ ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಗುಣಮ್ಮ ಹಾಗೂ ಲತಾ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಇನ್ನು ಕುಟುಂಬದ ಮೂಲಗಳು ಹೇಳುವ ಪ್ರಕಾರ ಕೆಲವು ದಿನಗಳಿಂದ ಅಶ್ವಿನ್ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎಂದು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com