ಮುಜಾಫರ್‌ನಗರ್: ಶಿವಸೇನೆಯ ನಾಯಕ ಸುಶೀಲ್ ಕುಮಾರ್ ಜೈನ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ..ಜೈನ ಧರ್ಮದವರಾಗಿದ್ದ ಸುಶೀಲ್ ಮಂಗಳವಾರ ಇಸ್ಲಾಂಗೆ ಮತಾಂತರಗೊಂಡಿದ್ದು, ಅವರು ಮೊಹಮ್ಮದ್ ಅಬ್ದುಲ್ ಸಮದ್ ಎಂಬ ಹೆಸರನ್ನು ಸ್ವೀಕರಿಸಿದ್ದಾರೆ..ಯಾವುದೇ ರೀತಿಯ ಒತ್ತಡಗಳಿಲ್ಲದೆ, ಸ್ವ ಇಚ್ಛೆಯಂತೆ ನಾನು ಫೆ. 15ಕ್ಕೆ ಇಸ್ಲಾಂಗೆ ಮತಾಂತರಗೊಂಡಿದ್ದೇನೆ ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ. .ಮಂಗಳವಾರ ಮಹಾವೀರ ಜಯಂತಿ ಆಚರಣೆ ವೇಳೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸುಶೀಲ್ ಕುಮಾರ್ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ..ಸುಶೀಲ್ ಕುಮಾರ್ ಮತಾಂತರಗೊಂಡಿರುವ ಸುದ್ದಿ ಗೊತ್ತಾದ ಕೂಡಲೇ ಮುಜಾಫರ್ ನಗರ್ ಜಿಲ್ಲೆಯ ಕಟೌಲಿ ನಗರದಲ್ಲಿ ಜನ ಕೋಪಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics