ಅಮೀರ್ ಖಾನ್ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಬರ ಪೀಡಿತ ತಾಲ್ ಮತ್ತು ಕೊರೆಗಾಂವ್ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಮೀರ್ ಆಪ್ತಮೂಲಗಳು ಆತ ಯಾವುದೇ ಗ್ರಾಮಗಳನ್ನು ದತ್ತು ತೆಗೆದುಕೊಂಡಿಲ್ಲ. ಆದರೆ ಪಾನಿ ಫೌಂಡೇಷನ್ ಎಂಬ ಎನ್‌ಜಿಒ ಜತೆ ಸೇರಿ ಬರಪೀಡಿತ ಪ್ರದೇಶಗಳಲ್ಲಿರುವ 120 ಗ್ರಾಮಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದಿವೆ.