ಟಿಡಿಪಿ ಗೆ ಸೇರಿದ ಮತ್ತೊಬ್ಬ ವೈಎಸ್ ಆರ್ ಕಾಂಗ್ರೆಸ್ ಶಾಸಕ

ಆಂಧ್ರ ಪ್ರದೇಶದ ಶ್ರೀಶೈಲಂ ಶಾಸಕ ಬುದ್ದ ರಾಜಶೇಖರ ರೆಡ್ಡಿ ವೈಎಸ್ ಆರ್ ಕಾಂಗ್ರೆಸ್ ತೊರೆದು ಚಂದ್ರ ಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಪಕ್ಷಾಂತರಗೊಂಡಿದ್ದಾರೆ..
ಬುದ್ದ ರಾಜಶೇಖರ ರೆಡ್ಡಿ
ಬುದ್ದ ರಾಜಶೇಖರ ರೆಡ್ಡಿ
Updated on: 

ವಿಜಯವಾಡ: ಆಂಧ್ರ ಪ್ರದೇಶದ ಶ್ರೀಶೈಲಂ ಶಾಸಕ ಬುದ್ದ ರಾಜಶೇಖರ ರೆಡ್ಡಿ ವೈಎಸ್ ಆರ್ ಕಾಂಗ್ರೆಸ್ ತೊರೆದು ಚಂದ್ರ ಬಾಬು ನಾಯ್ಡು ನೇತೃತ್ವದ ಟಿಡಿಪಿಗೆ  ಪಕ್ಷಾಂತರಗೊಂಡಿದ್ದಾರೆ.

ಇಂದು ಬೆಳಗ್ಗೆ 9.5 ನಿಮಿಷದ ಶುಭ ಮೂಹೂರ್ತದಲ್ಲಿ ರಾಜಶೇಖರ್ ರೆಡ್ಡಿ ಟಿಡಿಪಿ ಮುಖ್ಯಸ್ಥ ಚಂದ್ರ ಬಾಬು ನಾಯ್ಡು ಅವರನ್ನು ಅವರ ರಿವರ್ ಫ್ರಂಟ್ ನಿವಾಸದಲ್ಲಿ ಭೇಟಿ ಮಾಡಿ ಪಕ್ಷ ಸೇರಿದರು.

ಈ ವೇಳೆ ರಾಜಶೇಖರ್ ಅವರಿಗೆ ಆಡಳಿತಾರೂಢ ಪಕ್ಷದ ಗುರುತಾದ ಹಳದಿ ಶಾಲನ್ನು ನೀಡಿ ಪಕ್ಷಕ್ಕೆ ಸ್ವಾಗತಿಸಲಾಯಿತು. ಈಗಾಗಲೇ ವೈ ಎಸ್ ಆರ್ ಕಾಂಗ್ರೆಸ್ ನ ಹಲವು ಶಾಸಕರು ಟಿಡಿಪಿ ಸೇರಿದ್ದಾರೆ.

ರಾಜಶೇಖರ ರೆಡ್ಡಿ ಕರ್ನೂಲಿನ ವೈಎಸ್ ಆರ್ ಸಿಯ ಜಿಲ್ಲಾ ಘಟಕದ ಅಧ್ಯ.ಕ್ಷರೂ ಕೂಡ ಆಗಿ ನೇಮಕ ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com