ಕೋಲ್ಕತಾದ ಗಾರ್ಡನ್ ರೀಚ್ ಗೆ ಬನ್ನಿ ಮಿನಿ ಪಾಕಿಸ್ತಾನ ತೋರಿಸುತ್ತೇನೆ: ತೃಣಮೂಲ ಕಾಂಗ್ರೆಸ್ ನಾಯಕನಿಂದ ವಿವಾದಾತ್ಮಕ ಹೇಳಿಕೆ

ಚುನಾವಣಾ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ ನಾಯಕ ಫಿರ್ಹಾದ್ ಹಕೀಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ನ ನಾಯಕ ಫಿರ್ಹಾದ್ ಹಕೀಮ್
ತೃಣಮೂಲ ಕಾಂಗ್ರೆಸ್ ನ ನಾಯಕ ಫಿರ್ಹಾದ್ ಹಕೀಮ್

ಕೋಲ್ಕತಾ: ಚುನಾವಣಾ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ ನಾಯಕ ಫಿರ್ಹಾದ್ ಹಕೀಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಪತ್ರಿಕೆಯೊಂದರ ಮಾಹಿತಿಯ ಪ್ರಕಾರ, ಮಮತಾ ಬ್ಯಾನರ್ಜಿ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಯನ್ನು ನಿರ್ವಹಿಸುತ್ತಿರುವ ಫಿರ್ಹಾದ್ ಹಕೀಂ, ಪಶ್ಚಿಮ ಬಂಗಾಳದ ಗಾರ್ಡನ್ ರೀಚ್ ನ್ನು ಮಿನಿ ಪಾಕಿಸ್ತಾನ ಎಂದು ಹೇಳಿದ್ದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಪಾಕಿಸ್ತಾನದ ಪತ್ರಕರ್ತರೊಂದಿಗೆ ಮಾತನಾಡುತ್ತಾ," ನನ್ನೊಂದಿಗೆ ಬನ್ನಿ ನಿಮಗೆ ಕೋಲ್ಕತಾದಲ್ಲಿ ಮಿನಿ ಪಾಕಿಸ್ತಾನವನ್ನು ತೋರಿಸುತ್ತೇನೆ ಎಂದು ಹೇಳಿದ್ದನ್ನು ಪಾಕ್ ಪತ್ರಕರ್ತರು ವರದಿ ಮಾಡಿದ್ದಾರೆ. ಹೇಳಿಕೆ ವಿರುದ್ಧ ಆಕ್ರೋಶಗೊಂಡಿರುವ ಬಿಜೆಪಿ ನಾಯಕ ಸಿದ್ಧಾರ್ಥ ನಾಥ್ ಸಿಂಗ್, ಫಿರ್ಹಾದ್ ಗೆ ಮತ ನೀಡಬೇಡಿ ಎಂದು ಜನತೆಗೆ ಕರೆ ನೀಡಿದ್ದಾರೆ.

ಗಾರ್ಡನ್ ರೀಚ್ ಪ್ರದೇಶ ಫಿರ್ಹಾದ್ ಪ್ರತಿನಿಧಿಸುವ ಕ್ಷೇತ್ರದಲ್ಲಿದ್ದು ಇಲ್ಲಿ ಮಿನಿ ಪಾಕಿಸ್ತಾನವಿದೆ ಎಂದು ಹೇಳಿರುವುದು ತೃಣ ಮೂಲ ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿದೆ. ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಫಿರ್ಹಾದ್, ಬಿಜೆಪಿ ಕೋಮುವಾದದ ರಾಜಕೀಯ ಮಾಡಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com