ಕೆನಡಾದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಭಾರತೀಯ ವಿದ್ಯಾರ್ಥಿ ಸಾವು

ಕೆನಡಾದ ಟೊರೆಂಟೊದಲ್ಲಿ ದುಷ್ಕರ್ಮಿಗಳು ಗುಂಡೇಟಿಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ...
ಗುಂಡಿನ ದಾಳಿ
ಗುಂಡಿನ ದಾಳಿ

ಕೆನಡಾ: ಕೆನಡಾದ ಟೊರೆಂಟೊದಲ್ಲಿ ದುಷ್ಕರ್ಮಿಗಳು ಗುಂಡೇಟಿಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಮೃತ ವಿದ್ಯಾರ್ಥಿನಿ ತೆಲಂಗಾಣದ ಮೆಹಬೂಬ್ ನಗರದ ನಿವಾಸಿ 24 ವರ್ಷದ ಸಿನ್ಶಿಯಾ ಮುಲ್ಲಪುಡಿ ಎಂದು ಗುರುತಿಸಲಾಗಿದೆ. ಮಾಲ್ ನಲ್ಲಿ ಶಾಪಿಂಗ್ ಮುಗಿಸಿ ಶಿನ್ಶಿಯಾ ಸೇರಿದಂತೆ ಮೂವರು ಎಸ್ ಯುವಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಬೆನ್ನಟ್ಟಿದ ದುಷ್ಕರ್ಮಿಗಳು ಡ್ರೈವರ್ ಮೇಲೆ ಗುಂಡು ಹಾರಿಸಿದ್ದಾರೆ.

ದುಷ್ಕರ್ಮಿಗಳು ಹಾರಿಸಿದ ಗುಂಡು ಸಿನ್ಶಿಯಾಗೆ ತಗುಲಿದೆ. ಕೂಡಲೆ ಆಕೆಯನ್ನು ಸನ್ನಿಬ್ರೋಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸನ್ಶಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com