ವಿಶೇಷ, ಸ್ಥಾನಮಾನಕ್ಕೆ ಆಗ್ರಹಿಸಿ ಆಂಧ್ರಪ್ರದೇಶ ಬಂದ್

ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ವೈಎಸ್‌ಆರ್‌ಸಿ , ಎಡ ಪಕ್ಷಗಳ ಹಾಗೂ ಇತರೆ ಕಾರ್ಯಕರ್ತರು ಆಂಧ್ರದಾದ್ಯಂತ ಬಂದ್ ಗೆ ಕರೆ ನೀಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಆಂಧ್ರಪ್ರದೇಶ: ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ವೈಎಸ್‌ಆರ್‌ಸಿ , ಎಡ ಪಕ್ಷಗಳ ಹಾಗೂ ಇತರೆ ಕಾರ್ಯಕರ್ತರು ಆಂಧ್ರದಾದ್ಯಂತ ಬಂದ್ ಗೆ ಕರೆ ನೀಡಿದ್ದಾರೆ.

ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ  ಬಾಗಿಲು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದ್ದಾರೆ. ಆಂಧ್ರದ ವಿಜಯವಾಡ, ವಿಶಾಖಪಟ್ಟಣ, ತಿರುಮಲ ಸೇರಿದಂತೆ 13 ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬಂದ್ ಹಿನ್ನೆಲೆಯಲ್ಲಿ ಆಂಧ್ರ ಸ್ತಬ್ಧವಾಗಿದ್ದು, ಎಲ್ಲ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಬಂದ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಲವು ಕಾರ್ಮಿಕ ಸಂಘಟನೆಗಳು ಕೂಡ ಬೆಂಬಲ ನೀಡಿವೆ.

ಕೆಲ ಪ್ರದೇಶಗಳಲ್ಲಿ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರು ಆಂಧ್ರ ಪ್ರದೇಶ ಸಾರಿಗೆ ಬಸ್ ಗಳನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ವಿಶಾಖಪಟ್ಟಣ, ತಿರುಪತಿ ಮತ್ತು ಗುಂಟೂರುಗಳಲ್ಲಿ ಕೆಲವು ವಾಹನಗಳನ್ನು ಪ್ರತಿಭಟನಾಕರರು ತಡೆದರು.

ಇನ್ನೂ ಹಲವು ಪ್ರತಿಭಟನಾಕಾರರನ್ನು ಹಾಗೂ ಅವರ ಮುಖಂಡರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com