ಇಂಫಾಲ್ ನಲ್ಲಿ ಮತ್ತೊಂದು ಬಾಂಬ್ ಪತ್ತೆ

ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧ ಹಾಗೂ ಎರಡು ವರ್ಷದ ಹೆಣ್ಣು ಮಗು ನಿನ್ನೆ ಸ್ಫೋಟಗೊಂಡು ಗಾಯಗೊಂಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಇಂಫಾಲ್: ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧ ಹಾಗೂ ಎರಡು ವರ್ಷದ ಹೆಣ್ಣು ಮಗು ನಿನ್ನೆ ಸ್ಫೋಟಗೊಂಡು ಗಾಯಗೊಂಡ ಸ್ಥಳದಲ್ಲಿಯೇ ಇಂದು ಬೆಳಗ್ಗೆ ಮೂರೂವರೆ ಕೆ.ಜಿ ತೂಕದ ಶಕ್ತಿಶಾಲಿ ಬಾಂಬ್ ವೊಂದನ್ನು ವಶಪಡಿಸಿಕೊಳ್ಳಲಾಗಿದೆ.
ನಿಷ್ಕ್ರಿಯಗೊಂಡ ಬಾಂಬ್ ಇಲ್ಲಿನ ಪಿಐಬಿ(ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ)ಯ ರಕ್ಷಕ ಕೇಂದ್ರದಿಂದ 5 ಮೀಟರ್ ದೂರದಲ್ಲಿ, ನಿನ್ನೆ ಸ್ಫೋಟ ನಡೆದ ಸ್ಥಳದಿಂದ ಕೇವಲ 20 ಮೀಟರ್ ಗಳಷ್ಟು ದೂರದಲ್ಲಿ ಗಿಡದ ಮಡಕೆಯಲ್ಲಿ ಕಂಡುಬಂದಿದೆ.
ಸ್ವಾತಂತ್ಯ ದಿನ ಹತ್ತಿರ ಬರುತ್ತಿದ್ದಂತೆ ಮಣಿಪುರದಲ್ಲಿ ಅನೇಕ ಬಂಡುಕೋರರು ಇಂತಹ ದುಷ್ಕೃತ್ಯದಲ್ಲಿ ತೊಡಗಿದ್ದು, ಪೊಲೀಸರು ಇದಕ್ಕೆ ಸಂಪರ್ಕ ಕಲ್ಪಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com