ನವದೆಹಲಿ: ಮುಂಬರುವ ಶಿಕ್ಷಕರ ದಿನದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಟೀಚರ್ ಆಗಲಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡಲಿದ್ದಾರೆ..ಕಳೆದ ಬಾರಿಯು ಶಿಕ್ಷಕರ ದಿನದಂದು ರಾಷ್ಟ್ರಪತಿ ಮುಖರ್ಜಿ ರಾಷ್ಟ್ರಪತಿ ಭವನದ ಆವರಣದಲ್ಲಿರುವ ಡಾ. ರಾಜೇಂದ್ರ ಪ್ರಸಾದ್ ಸರ್ವೋದಯ ವಿದ್ಯಾಲಯದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದರು..ರಾಷ್ಟ್ರಪತಿ ಮುಖರ್ಜಿ 1969ರಲ್ಲಿ ರಾಜಕೀಯಕ್ಕೆ ಬರುವ ಮುಂಚೆ ಶಿಕ್ಷಕರಾಗಿ, ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು..ರಾಷ್ಟ್ರಪತಿಯವರಿಂದ ಪಾಠ ಹೇಳಿಸುವ ಯೋಜನೆ ಆರಂಭವಾದದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ-ಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಅವರಿಂದ..‘ಶಿಕ್ಷಕರಾಗಿ ಎಂಬ ಕಾರ್ಯಕ್ರಮದಡಿ ಕಲೆ, ಸಂಸ್ಕೃತಿ, ಕ್ರೀಡೆ, ರಾಜಕೀಯ ಹಾಗೂ ಉದ್ಯಮ ಮೊದಲಾದ ರಂಗಗಳ ಸಾಧಕರನ್ನು ಶಿಕ್ಷಕರಾಗಿ ಅಹ್ವಾನಿಸಲಾಗುತ್ತದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics