ಮೂವರು ದತ್ತು ಪುತ್ರಿಯರ ಮೇಲೆ ಅತ್ಯಾಚಾರ: ನಿವೃತ್ತ ವಿಜ್ಞಾನಿ ಬಂಧನ

ತಾನು ದತ್ತು ತೆಗೆದುಕೊಂಡಿದ್ದ ಮೂವರು ಬಾಲಕಿಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ ಆರೋಪದ ಮೇಲೆ ನಿವೃತ್ತ ವಿಜ್ಞಾನಿಯೊಬ್ಬರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನಾಗ್ಪುರ: ತಾನು ದತ್ತು ತೆಗೆದುಕೊಂಡಿದ್ದ ಮೂವರು ಬಾಲಕಿಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ ಆರೋಪದ ಮೇಲೆ ನಿವೃತ್ತ ವಿಜ್ಞಾನಿಯೊಬ್ಬರು ಬಂಧಿಸಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.
16 ವರ್ಷದ ಹಿರಿಯ ಹುಡುಗಿ ನೀಡಿದ ದೂರಿನ ಆಧಾರದ ಮೇಲೆ ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಶೋಧನ ಸಂಸ್ಥೆಯ ನಿವೃತ್ತ ವಿಜ್ಞಾನಿ, 72 ವರ್ಷದ ಮಕ್ಸೂದ್‌ ಅನ್ಸಾರಿಯನ್ನು ಬುಧವಾರ ಬಂಧಿಸಿರುವುದಾಗಿ ನಾಗ್ಪುರ ಪೊಲೀಸರು ಹೇಳಿದ್ದಾರೆ. 
ತಾನು ಒಂದನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದಲೂ ಮಕ್ಸೂದ್‌ ಅನ್ಸಾರಿ ತನ್ನನ್ನು ಲೈಂಗಿಕವಾಗಿ  ಬಳಸಿಕೊಳ್ಳುತ್ತಿದ್ದ ಎಂದು ಆತನ ಹಿರಿಯ ದತ್ತು ಪುತ್ರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಅಲ್ಲದೆ ತನ್ನಂತೆ ಇನ್ನಿಬ್ಬರು ದತ್ತು ಪುತ್ರಿಯರಾದ 11 ವರ್ಷ ಮತ್ತು ಆರೂವರೆ ವರ್ಷದ ಬಾಲಕಿಯರನ್ನು ಕೂಡ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳುವುದಕ್ಕೆ ಅನ್ಸಾರಿ ಬಳಸಿಕೊಂಡಿರುವುದಾಗಿ ಹೇಳಿದ್ದಾಳೆ.
"ನನ್ನನ್ನು ಮದುವೆಯಾಗುವಂತೆಯೂ ಆತ (ಮಕ್ಸೂದ್‌) ಕೇಳಿಕೊಂಡಿದ್ದ. ಪೊಲೀಸರಿಗೆ ವಿಷಯ ತಿಳಿಸಿದರೆ ಮೂವರನ್ನು ಕೊಂದು ಬಿಡುವುದಾಗಿ ನಮಗೆ ಬೆದರಿಕೆ ಹಾಕಿದ್ದ' ಎಂದು ಬಾಲಕಿಯು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಮಕ್ಸೂದ್‌ ಅನ್ಸಾರಿ ಈ ಹಿಂದೆ ಎರಡು ಬಾರಿ ಮದುವೆ ಮಾಡಿಕೊಂಡಿದ್ದ. ಆದರೆ ಆತನಿಗೆ ಇಬ್ಬರೂ ಹೆಂಡಂದಿರಿಂದ ಮಕ್ಕಳು ಹುಟ್ಟಿರಲಿಲ್ಲ. ಬಳಿಕ ಇಬ್ಬರೂ ಹೆಂಡಂದಿರು ಆತನನ್ನು ತ್ಯಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
ಮೂವರು ಬಾಲಕಿಯರು ಚಿಕ್ಕವರಿದ್ದಾಗಲೇ ಅವರನ್ನು ಮಕ್ಸೂದ್‌ ಅನ್ಸಾರಿ ದತ್ತು ತೆಗೆದುಕೊಂಡಿದ್ದ. ಆತನ ವಿರುದ್ಧ ದೂರು ದಾಖಲಾದಾಗ ಪೊಲೀಸರು ಆತನ ಮನೆಗೆ ಹೋಗಿ ಶೋಧ ಕಾರ್ಯ ನಡೆಸಿದ್ದಾಗ ಅವರಿಗೆ ಹುಡುಗಿಯರನ್ನು ದತ್ತು ತೆಗೆದುಕೊಂಡ ಬಗ್ಗೆ ಯಾವುದೇ ದಾಖಲೆ ಪತ್ರಗಳು ಸಿಕ್ಕಿರಲಿಲ್ಲ. ಬಾಲಕಿಯರನ್ನು ದತ್ತು ತೆಗೆದುಕೊಂಡ ಬಗ್ಗೆ ಯಾವುದೇ ಕಾನೂನು ಮಾಹಿತಿಯನ್ನು ಆತ ಪೊಲೀಸರಲ್ಲಿ ಬಹಿರಂಗಪಡಿಸಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿ ದೀಪಾಲಿ ಮಾಸ್ರಿಕರ್‌ ಅವರು ತಿಳಿಸಿದ್ದಾರೆ.
ಮಕ್ಸೂದ್‌ ಅನ್ಸಾರಿ ವಿರುದ್ಧ ಪೊಲೀಸರು ಅತ್ಯಾಚಾರ ಹಾಗೂ ಮಕ್ಕಳಿಗೆ ಲೈಂಗಿಕ ಅಪರಾಧಗಳ ವಿರುದ್ಧ ರಕ್ಷಣೆ ನೀಡುವ ಪೊಸ್ಕೊ ಕಾಯಿದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com