ನೋಟು ನಿಷೇಧದಿಂದ ಬಡವರಿಗೆ ಶಕ್ತಿ, ಮುಂದಿನ ಪೀಳಿಗೆಗೆ ಲಾಭದಾಯಕ: ಪ್ರಧಾನಿ ಮೋದಿ

ರು.500 ಹಾಗೂ 1,000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿರುವ ನಿರ್ಧಾರ ಬಡವರ ಶಕ್ತಿಯನ್ನು ಹೆಚ್ಚಿಸಲಿದ್ದು, ಮುಂದಿನ ಪೀಳಿಗೆಗೆ ಲಾಭದಾಯಕವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರವಾರ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on: 

ನವದೆಹಲಿ: ರು.500 ಹಾಗೂ 1,000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿರುವ ನಿರ್ಧಾರ ಬಡವರ ಶಕ್ತಿಯನ್ನು ಹೆಚ್ಚಿಸಲಿದ್ದು, ಮುಂದಿನ ಪೀಳಿಗೆಗೆ ಲಾಭದಾಯಕವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರವಾರ ಹೇಳಿದ್ದಾರೆ.

ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಯುಂಟು ಮಾಡಿ ಗದ್ದಲವನ್ನುಂಟು ಮಾಡುತ್ತಿವೆ. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಟ್ವಿಟರ್ ನಲ್ಲಿ ಸರಣಿಯಾಗಿ ಟ್ವೀಟ್ ಮಾಡಿರುವ ಅವರು, ನೋಟು ನಿಷೇಧದ ಬಡಲವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಶಕ್ತಿಯನ್ನು ಹೆಚ್ಚಿಸಲಿದೆ ಹಾಗೂ ಮುಂದಿನ ಪೀಳಿಗೆಗೆ ಲಾಭದಾಯಕವಾಗಲಿದೆ. ಅಲ್ಲದೆ, ರೈತರು, ಕಾರ್ಮಿಕರು ಹಾಗೂ ವ್ಯಾಪಾರಸ್ಥರಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ, ಕಪ್ಪುಹಣ ಹಾಗೂ ಭಯೋತ್ಪಾದನೆ ವಿರುದ್ಧ ಕೇಂದ್ರ ನಡೆಸುತ್ತಿರುವ ಯಜ್ಞಕ್ಕೆ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದು, ದೇಶದ ಜನತೆಗೆ ಈ ಮೂಲಕ ಸೆಲ್ಯೂಟ್ ಹೊಡೆಯುತ್ತಿದ್ದೇನೆ. ಎಲ್ಲರೂ ಕೈಜೋಡಿಸಿ ಕಪ್ಪುಹಣದ ವಿರುದ್ಧ ಹೋರಾಡೋಣ. ಈ ಹೋರಾಟ ಬಡವರು, ಮಧ್ಯಮವರ್ಗದ ಜನರು ಹಾಗೂ ಮುಂದಿನ ಯುವ ಪೀಳಿಗೆಗೆ ಸಹಾಯಕವಾಗಲಿದೆ. ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ ರೈತರು, ವ್ಯಾಪಾರಸ್ಥರು ಹಾಗೂ ಕಾರ್ಮಿಕರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ನೋಟು ನಿಷೇಧದಿಂದ ಎದುರಾಗಿರುವ ಸಮಸ್ಯೆಗಳು ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ದೀರ್ಘಾಕಾಲಿಕ ಲಾಭವನ್ನು ತರಲಿದೆ. ಹೀಗಾಗಿ ಜನತೆ ಬದಲಾವಣೆಗಾಗಿ ಸಮಾೆೊಧಾನದಿಂದ ಕಾಯಬೇಕಿದೆ. ನಾನು ಯಾವಾಗಲೂ ಹೇಳುತ್ತಿದ್ದೆ, ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಲ್ಲಿ ಸಮಸ್ಯೆಗಳು ಎದುರಾಗುತ್ತದೆ ಎಂದು. ಪ್ರಸ್ತುತ ಎದುರಾಗಿರುವ ನೋವು ಕೂಡ ತಾತ್ಕಾಲಿಕವಾಗಿದ್ದು, ದೀರ್ಘಾವಧಿಯ ಲಾಭ ಮುಂದೆ ಬರಲಿದೆ.

ನೋಟು ನಿಷೇಧದಿಂದ ರೈತರು, ವ್ಯಾಪಾರಿಗಳು ಹಾಗೂ ಕಾರ್ಮಿಕರಿಗೆ ಹಲವಾರು ರೀತಿಯಲ್ಲಿ ಲಾಭವಾಗಲಿದೆ. ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸದಿದ್ದರೆ ದೇಶದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮಾರಕವಾಗಲಿದೆ. ಕೇಂದ್ರ ನಿರ್ಧಾರ ಮುಂದಿನ ದಿನಗಳಲ್ಲಿ ಹಳ್ಳಿಗಳ ಸ್ವರೂಪವೂ ಬದಲಾಗಲಿದೆ.

ಐತಿಹಾಸಿಕ ಅವಕಾಶವೊಂದು ನಮಗೆ ದೊರಕಿದೆ. ದೇಶವನ್ನು ನಗದು ರಹಿತ ರಾಷ್ಟ್ರ ಮಾಡುವ ಅವಕಾಶ ನಮಗೆ ದೊರಕಿದೆ. ನಗದು ಚಲಾವಣೆಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸುವ ಅವಕಾಶ ದೊರಕಿದೆ. ದೇಶದ ಬದಲಾವಣೆಯಲ್ಲಿ ನಮ್ಮ ಯುವ ಜನಾಂಗ ಪ್ರಮುಖರಾಗಿದ್ದು, ನಮ್ಮ ಯುವ ಜನಾಂಗ ದೇಶವನ್ನು ಭ್ರಷ್ಟಾಚಾರ ಮುಕ್ತ ಹಾಗೂ ನಗದು ರಹಿತ ದೇಶವಾಗಿಸಲು ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com