ವಿಜಯ್ ಮಲ್ಯಾ ಟ್ವಿಟರ್ ಖಾತೆ ಹ್ಯಾಕ್!

ಮದ್ಯದ ದೊರೆ ವಿಜಯ್ ಮಲ್ಯ ಅವರ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಆಕ್ಷೇಪಾರ್ಹ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ವಿಜಯ್ ಮಲ್ಯಾ ಟ್ವಿಟರ್ ಖಾತೆ ಹ್ಯಾಕ್!
ವಿಜಯ್ ಮಲ್ಯಾ ಟ್ವಿಟರ್ ಖಾತೆ ಹ್ಯಾಕ್!
Updated on
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಆಕ್ಷೇಪಾರ್ಹ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ಡಿ.9 ರಂದು ಮಲ್ಯ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಲೀಜನ್ ಎಂಬ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಇದೇ ಹೆಸರಿನ ಗ್ರೂಪ್ ಇತ್ತೀಚೆಗಷ್ಟೇ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿತ್ತು ಎಂಬುದು ಗಮನಾರ್ಹ ಅಂಶವಾಗಿದೆ. 
ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಸ್ವತಃ ವಿಜಯ್ ಮಲ್ಯ ಟ್ವೀಟ್ ಮಾಡಿದ್ದು, ನನ್ನ ಟ್ವಿಟರ್ ಖಾತೆಯನ್ನು ಲೀಜನ್ ಎಂಬ ಹೆಸರಿನ ತಂಡ ಹ್ಯಾಕ್ ಮಾಡಿ ಆಕ್ಷೇಪಾರ್ಹ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಶೀಘ್ರವೇ ಟ್ವೀಟ್ ಖಾತೆಯನ್ನು ಸರಿಪಡಿಸಲಾಗುವುದು ಎಂದು ಬರೆದಿದ್ದಾರೆ. 
ಟ್ವಿಟರ್ ಖಾತೆಯಷ್ಟೇ ಅಲ್ಲದೇ ವಿಜಯ್ ಮಲ್ಯ ಅವರ ಇ-ಮೇಲ್ ಖಾತೆಗಳನ್ನೂ ಹ್ಯಾಕ್ ಮಾಡಲಾಗಿದ್ದು, ಹ್ಯಾಕರ್ ಗಳು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಹ್ಯಾಕರ್ ಗಳು " ನಾವು ಹಲವು ಬ್ಯಾಂಕ್ ಗಳಲ್ಲಿ ವಿಜಯ್ ಮಲ್ಯ ಅವರಿಗೆ ಸೇರಿದ ಆಸ್ತಿಯ ವಿವರ ಹಾಗೂ ಮಲ್ಯ ಅವರಿಗೆ ಸಂಬಂಧಿಸಿದ ಎಲ್ಲಾ ಪಾಸ್ವರ್ಡ್ ಗಳ ಸಹಿತ ವಾಪಸ್ಸಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಹ್ಯಾಕ್ ಮಾಡುವುದನ್ನು ಮುಂದುವರೆಸುವುದಾಗಿ ಹೇಳಿರುವ ಹ್ಯಾಕರ್ ಗಳು ತಮ್ಮ ಮುಂದಿನ ಯೋಜನೆಗಳಿಗೆ ಜನಬೆಂಬಲ ಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com