

ಅಮರ್'ಕಂಟಕ್: ನರ್ಮದಾ ಸೇವಾ ಯಾತ್ರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ ಚಾಲನೆ ನೀಡಿದ್ದಾರೆ.
ನರ್ಮದಾ ನದಿಯನ್ನು ಮಾಲಿನ್ಯ ಮುಕ್ತ ನದಿಯಾಗಿಸುವ ಉದ್ದೇಶದಿಂದ 5 ತಿಂಗಳ ಸುಧೀರ್ಘ ಯಾತ್ರೆಗೆ ಚೌಹಾಣ್ ಅವರು ಚಾಲನೆ ನೀಡಿದ್ದಾರೆ.
ಯಾತ್ರೆಗೆ ಚಾಲನೆ ನೀಡಿದ ಬಳಿಕ ಆಶ್ರಮಗಳಿಗೆ ಭೇಟಿ ನೀಡಿದ ಚೌಹಾಣ್ ಅವರು ಯಾತ್ರೆಯಲ್ಲಿ ಭಾಗವಹಿಸುವಂತೆ ಧಾರ್ಮಿಕ ನಾಯಕರಿಗೆ ಆಹ್ವಾನ ನೀಡಿದರು.
ನರ್ಮದಾ ಸೇವಾ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ನೀರು ಸಂರಕ್ಷಣೆ ಕುರಿತ ಜಾಗೃತಿಯನ್ನು ಈ ಯಾತ್ರೆ ಮೂಡಿಸಲಿದ್ದು, ವಾರಕ್ಕೊಮ್ಮೆ ಯಾತ್ರೆಯಲ್ಲಿ ಭಾಗವಹಿಸುತ್ತೇನೆಂದು ಹೇಳಿದ್ದಾರೆ.
16 ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದ್ದು, ಯಾತ್ರೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ನದಿ ಬಳಿಯಿರುವ ಗ್ರಾಮಸ್ಥರು ಹಾಗೂ ನರ್ಮದಾ ಸೇನಾ ಸಮಿತಿ ನದಿಯನ್ನು ಸಂರಕ್ಷಿಸುವ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಯಾತ್ರೆ ವೇಳೆ ನರ್ಮದಾ ನದಿ ದಂಡೆಗಳ ಬಳಿ ಮರಗಳನ್ನು ನೆಡಲಾಗುತ್ತದೆ, ನೈರ್ಮಲ್ಯ ನೀರು ನದಿಗೆ ಹೋಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.