ಈ ಮೊದಲು ಅಕ್ಟೋಬರ್ ನಲ್ಲಿ ಕಿಂಗ್ ಫಿಶರ್ ವಿಲ್ಲಾವನ್ನು ಹರಾಜು ಹಾಕಲಾಗಿತ್ತು. ಆಗಲೂ ವಿಜಯ್ ಮಲ್ಯಾ ಅವರ ವಿಲ್ಲಾವನ್ನು ಖರೀದಿಸಲು ಯಾರೂ ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಮೂಲ ಬೆಲೆಗಿಂತ ಶೇ.5ರಷ್ಟು ವಿನಾಯ್ತಿ ನೀಡಿ 85.29 ಕೋಟಿಯ ಹರಾಜು ಮೊತ್ತವನ್ನು 81 ಕೋಟಿಗೆ ಇಳಿಕೆ ಮಾಡಲಾಗಿತ್ತು. ಆದರೆ ಈ ಬಾರಿಯೂ ಸಹ ವಿಲ್ಲಾವನ್ನು ಖರೀದಿಸಲು ಯಾರೂ ಮುಂದಾಗಿಲ್ಲ.