ಶೇ.15 ರಷ್ಟಿದ್ದ ವ್ಯಾಟ್ ನ್ನು ಶೇ.9 ಕ್ಕೆ ಇಳಿಕೆ ಮಾಡಲಾಗಿದ್ದು ಪೆಟ್ರೋಲ್ ದರ 60 ರೂಪಾಯಿಗಳಿಗೆ ಇಳಿದಿದೆ. ಕಳೆದ ನಾಲ್ಕು ವರೆ ವರ್ಷಗಳಲ್ಲಿ ಗೋವಾ ಸರ್ಕಾರ 4 ನೇ ಬಾರಿಗೆ ವ್ಯಾಟ್ ನ್ನು ಇಳಿಕೆ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪೆಟ್ರೋಲ್ ದರವನ್ನು ಕಡಿಮೆ ಮಾಡುವುದು ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿತ್ತು. 2012 ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಪೆಟ್ರೋಲ್ ಮೇಲಿದ್ದ ವ್ಯಾಟ್ ನಲ್ಲಿ ಶೇ.22 ರಷ್ಟು ಇಳಿಕೆ ಮಾಡಿತ್ತು.