ರಾಜ್ಯ ಸರ್ಕಾರಗಳಿಂದ ಸಿಬಿಎಸ್ ಇ ಶಾಲೆಗಳ ಪ್ರಾಂಶುಪಾಲರ ನೇಮಕ: ಕಾನೂನು ತಿದ್ದುಪಡಿ

ಪ್ರಾಂಶುಪಾಲರ ಅರ್ಹತೆ ಪರೀಕ್ಷೆಯನ್ನು ಪಾಸು ಮಾಡಿಕೊಂಡವರು ಸಿಬಿಎಸ್ ಇ ಸಂಬಂಧಿತ ಖಾಸಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಪ್ರಾಂಶುಪಾಲರ ಅರ್ಹತೆ ಪರೀಕ್ಷೆಯನ್ನು ಪಾಸು ಮಾಡಿಕೊಂಡವರು ಸಿಬಿಎಸ್ ಇ ಸಂಬಂಧಿತ ಖಾಸಗಿ ಶಾಲೆಗಳಲ್ಲಿ ಪ್ರಾಂಶುಪಾಲರ ಹುದ್ದೆಗೆ ಅರ್ಹರು ಎಂದು ಸರ್ಕಾರ ತನ್ನ ಹೊಸ ತಿದ್ದುಪಡಿ ವಿದಾಯ ಕಾನೂನಿನಲ್ಲಿ ಹೇಳಿದೆ.
ಕೇಂದ್ರೀಯ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯ ಆಡಳಿತ ವಿಭಾಗ ಮೊನ್ನೆ 20ರಂದು ಸಭೆ ಸೇರಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಸಿಬಿಎಸ್ ಇ ಸಂಬಂಧಿತ ಖಾಸಗಿ ಶಾಲೆಗಳಲ್ಲಿ ಪ್ರಾಂಶುಪಾಲರ ನೇಮಕ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಅಂದರೆ ಸಿಬಿಎಸ್ಇ ಪಠ್ಯಕ್ರಮದ ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ಪ್ರಾಂಶುಪಾಲರ ನೇಮಕ ಆಯಾ ರಾಜ್ಯ ಸರ್ಕಾರಗಳಿಂದ ಆಗುತ್ತದೆಯೇ ಹೊರತು ಖಾಸಗಿ ಶಾಲೆಯ ಆಡಳಿತ ಮಂಡಳಿಯಿಂದಲ್ಲ.
ಈಗಾಗಲೇ ಖಾಸಗಿ ಶಾಲೆಗಳಲ್ಲಿ ನೇಮಕಗೊಂಡಿರುವ ಪ್ರಾಂಶುಪಾಲರು ಪಿಇಟಿ ಪರೀಕ್ಷೆಯನ್ನು ಎದುರಿಸಬೇಕು ಎಂದು ಸಿಬಿಎಸ್ಇ ಸಂಬಂಧಿತ ವಿದಾಯ ಕಾನೂನಿನಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com