ಕಾಂಗ್ರೆಸ್ ಗೆ ಓಟು ಹಾಕುವುದು ಡ್ರಗ್ಸ್ ವ್ಯಾಪಾರಿಗಳಿಗೆ ಮತ ಹಾಕಿದಂತೆ: ಕೇಜ್ರಿವಾಲ್

2017 ರ ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಹಾಗೂ ಅಕಾಲಿ ದಳ ರಹಸ್ಯ ಒಪ್ಪಂದ ಮಾಡಿಕೊಂಡಿವೆ ಎಂದು ಆಮ್ ಆದ್ಮಿ ಪಕ್ಷದ ಆರೋಪ ಮಾಡಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 
ಚಂಡೀಗಢ: 2017 ರ ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಹಾಗೂ ಅಕಾಲಿ ದಳ ರಹಸ್ಯ ಒಪ್ಪಂದ ಮಾಡಿಕೊಂಡಿವೆ ಎಂದು ಆಮ್ ಆದ್ಮಿ ಪಕ್ಷದ ಆರೋಪ ಮಾಡಿದ್ದು, ಪಂಜಾಬ್ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಹಾಗೂ ಕಂದಾಯ ಖಾತೆ ಸಚಿವ ಬಿಕ್ರಂ ಸಿಂಗ್ ಮಜಿಥಿಯ ಪರಸ್ಪರ ವಿರುದ್ಧವಾಗಿ ಕ್ರಮ ಕೈಗೊಳ್ಳದಂತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. 
ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಗೆ ಮತ ನೀಡುವುದೆಂದರೆ ಅದು ಡ್ರಗ್ ವ್ಯಾಪಾರಿಗಳಿಗೆ ಮತ ನೀಡಿದಂತೆ ಎಂದು ವ್ಯಂಗ್ಯವಾಡಿದ್ದಾರೆ. ಪಂಜಾಬ್ ನ ಸಿಎಂ ಪರ್ಕಾಶ್ ಸಿಂಗ್ ಬಾದಲ್ ಹಾಗೂ ಅಮರಿಂದರ್ ಸಿಂಗ್ ರಾಜ್ಯವನ್ನು ಸರತಿಯ ಆಧಾರದಲ್ಲಿ ಲೂಟಿ ಮಾಡಿದ್ದಾರೆ, ಪಂಜಾಬ್ ಜನತೆಗೆ ಈ ವರೆಗೂ ಪರ್ಯಾಯ ಆಯ್ಕೆಗಳಿರಲಿಲ್ಲ. ಆದರೆ ಈಗ ಆಮ್ ಆದ್ಮಿ ಪಕ್ಷ ಪರ್ಯಾಯವಾಗಿದ್ದು, ಆಪ್ ಗೆ ಮತ ನೀಡಿ ಎಂದು ರಾಜ್ಯದ ಜನತೆಯಲ್ಲಿ ಮನವೊ ಮಾಡಿದ್ದಾರೆ. 
ಪಂಜಾಬ್ ನಲ್ಲಿ ಡ್ರಗ್ಸ್ ನಿಷೇಧಕ್ಕೆ ಕ್ರಮ ಕೈಗೊಳ್ಳುವ ಅಮರಿಂದರ್ ಸಿಂಗ್ ಭರವಸೆಯನ್ನು ಸುಳ್ಳು ಭರವಸೆ ಎಂದಿರುವ ಕೇಜ್ರಿವಾಲ್, ಅಮರಿಂದರ್ ಸಿಂಗ್ ಈ ಹಿಂದೆ ಡ್ರಗ್ಸ್ ಜಾಲದೊಂದಿಗೆ ನಂಟು ಹೊಂದಿದ್ದ ಮಜಿಥಿಯ ವಿರುದ್ಧ ಸಿಬಿಐ ತನಿಖೆಗೆ ಆರೋಪಿಸಿದ್ದರು. ನಾನು ಮಜಿಥಿಯಾ ಅವರನ್ನು ಜೈಲಿಗೆ ಕಳಿಸುವ ಬಗ್ಗೆ ಮಾತನಾಡಿದಾಗಲೆಲ್ಲಾ ಕ್ಯಾಪ್ಟನ್ ಸಾಹೇಬರು ನನ್ನೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಆದರೂ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com