ಮೇಘಾಲಯದಲ್ಲಿ ಗಾರೋ ಉಗ್ರರಿಂದ ಬಾಂಬ್ ಸ್ಪೋಟ ಇಬ್ಬರು ಪೊಲೀಸರಿಗೆ ಗಾಯ

ಮೇಘಾಲಯದಲ್ಲಿ ಗಾರೋ ಉಗ್ರರು ಬಾಂಬ್ ಸ್ಪೋಟಿಸಿದ್ದು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಗಾರೋ ಉಗ್ರರು
ಗಾರೋ ಉಗ್ರರು

ಶಿಲ್ಲಾಂಗ್: ಮೇಘಾಲಯದಲ್ಲಿ ಗಾರೋ ಉಗ್ರರು ಬಾಂಬ್ ಸ್ಪೋಟಿಸಿದ್ದು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ದಕ್ಷಿಣ ಗಾರೋ ಹಿಲ್ಸ್ ನಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ)ದ ಮೂಲಕ ಉಗ್ರರು ಬಾಂಬ್ ಸ್ಪೋಟಿಸಿದ್ದಾರೆ. ಸ್ಪೋಟದಿಂದ ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡಿರುವ ಪೊಲೀಸರನ್ನು ರಾಬರ್ಟ್ ನೋಂಗ್ ಲೈಟ್ ಹಾಗೂ ಟೆನ್ನಿಸನ್ ಮಾರ್ಕ್ ಎಂದು ಗುರುತಿಸಲಾಗಿದೆ. ಗಾರೊ ನ್ಯಾಷನಲ್ ಲಿಬರೇಷನ್ ಆರ್ಮಿ ಉಗ್ರರು ರಸ್ತೆ ಬದಿಯಲ್ಲಿ ಸುಧಾರಿತ ಸ್ಪೋಟಕ ಸಾಧನ ಇರಿಸಿ ಬಾಂಬ್ ಸ್ಪೋಟ ಮಾಡಿದ್ದಾರೆ ಎಂದು ಮೇಘಾಲಯ ಐಜಿ ಜಿಹೆಚ್ ಪಿ ರಾಜು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿಗಳಿಗೆ ಪಡಿತರವನ್ನು ತಲುಪಿಸುವ ಬಸ್ ನ್ನು ಗುರಿಯಾಗಿರಿಸಿಕೊಂಡು ಬಾಂಬ್ ಸ್ಪೋಟಿಸಲಾಗಿದ್ದು  ಘಟನೆ ನಡೆದ ಬಾಘ್ ಮಾರ ಪ್ರದೇಶದಲ್ಲಿ ಗಾರೋ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com