

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ವಾಯುದಳದ ಗುಪ್ತಚರ ಅಧಿಕಾರಿಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಇದರಲ್ಲಿ 3031 ಗ್ರಾಂನ 26 ಬಂಗಾರದ ಗಟ್ಟಿಗಳು ಸುಮಾರು 75, 10, 485 ರು. ಬೆಲೆ ಬಾಳುತ್ತವೆ.
ಇನ್ನು ಹದಿನೆಂಟು ಬಂಗಾರದ ಬಳೆಗಳು 198 ಗ್ರಾಂ ಇದ್ದು, 4, 90, 622 ಮೌಲ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ಕಾರ್ಯ ಮುಂದುವರೆದಿದ್ದು, ತನಿಖೆ ನಡೆಸಲಾಗುತ್ತಿದೆ.