

ನವದೆಹಲಿ: ವಿವಿಧ ಸಂಘಟನೆಗಳ ಹೆಸರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಭಾರತದಲ್ಲಿ ಜೀವಂತವಾಗಿದೆ ಎಂದು ಅಖಿಲ ಭಾರತ ತನ್ಝೀಮ್ ಉಲೇಮಾ ಇ ಇಸ್ಲಾಂ(ಎಐಟಿಯುಐ) ಹೇಳಿದೆ.
ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಇಸ್ಲಾಂ ನಂಬುವ ಕುಟುಂಬಗಳು ಇಸ್ಲಾಮಿಕ್ ಸ್ಟೇಟ್ ಹಾಗೂ ಅಲ್ ಖೈದಾದಂತಹ ಭಯೋತ್ಪಾದನೆ ಸಂಘಟನೆಗಳನ್ನು ನಂಬುವುದಿಲ್ಲ ಹೀಗಾಗಿ ಭಾರತದಲ್ಲಿ ಇಸಿಸ್ ಉಗ್ರ ಸಂಘಟನೆ ಬೇರು ಬಿಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದರು. ಆದರೆ ಭಾರತದಲ್ಲಿ ವಿವಿಧ ಸಂಘಟನೆಗಳ ಹೆಸರಲ್ಲಿ ಇಸ್ಲಾಮಿಕ್ ಸ್ಟೇಟ್ ಬೇರು ಬಿಟ್ಟಿವೆ ಇದರಿಂದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡುತ್ತಿವೆ ಎಂದು ಮಂಡಳಿ ಹೇಳಿದೆ.
ರಾಷ್ಟ್ರೀಯ ಭದ್ರತೆ ಹಿನ್ನೆಲೆ ಭಾರತದಲ್ಲಿ ಉಗ್ರ ಸಂಘಟನೆಗಳನ್ನು ನಿಷೇಧಿಸಬೇಕಿದೆ ಎಂದು ಮುಸ್ಲಿಂ ಮಂಡಳಿ ಹೇಳಿದೆ. ಅಲ್ಲದೆ ವಿಶ್ವದೆಲ್ಲಡೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ತನ್ನ ಕರಾಳ ಕದಂಬ ಬಾಹುವನ್ನು ಚಾಚುತ್ತಿದೆ. ಆದರೆ ಇಂತ ಉಗ್ರ ಸಂಘಟನೆಯಲ್ಲಿ ಸೂಫಿ-ಸುನ್ನಿ ಮುಸ್ಲಿಂ ಯುವಕರು ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.