ಖಾಸಗಿ ವಲಯದಲ್ಲಿ ಓಬಿಸಿಗೆ ಶೇ.27ರಷ್ಟು ಮೀಸಲಾತಿಗೆ ಎನ್ ಸಿಬಿಸಿ ಶಿಫಾರಸು

ಖಾಸಗಿ ವಲಯದಲ್ಲಿ ಹಿಂದುಳಿದ ವರ್ಗ(ಓಬಿಸಿ)ಯವರಿಗೆ ಶೇ.27ರಷ್ಟು ಮೀಸಲಾತಿ ನೀಡಬೇಕು ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಖಾಸಗಿ ವಲಯದಲ್ಲಿ ಹಿಂದುಳಿದ ವರ್ಗ(ಓಬಿಸಿ)ಯವರಿಗೆ ಶೇ.27ರಷ್ಟು ಮೀಸಲಾತಿ ನೀಡಬೇಕು ಎಂದು ರಾಷ್ಟ್ರೀಯ ಹಿಂದುಳಿದ ಆಯೋಗ(ಎನ್ ಸಿಬಿಸಿ) ಶಿಫಾರಸು ಮಾಡಿದೆ. 
ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ಪತ್ರ ಬರೆದಿರುವ ಎನ್ ಸಿಬಿಸಿ, ಖಾಸಗಿ ವಲಯದ ಉದ್ಯೋಗಗಳಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಶೇ. 27ರಷ್ಟು ಮೀಸಲಾತಿ ನೀಡಬೇಕು ಎಂದು ಕೋರಿದೆ. 
ಶಾಲೆಗಳು, ಟ್ರಸ್ಟ್ ಗಳು, ಉದ್ಯಮ, ಆಸ್ಪತ್ರೆಗಳು ಸೇರಿದಂತೆ ಖಾಸಗಿ ವಲಯದಲ್ಲಿ ಶೇ.27ರಷ್ಟು ಮೀಸಲು ನೀಡುವ ಸಂಬಂಧ ಕಾನೂನು ರೂಪಿಸಬೇಕು. ಈ ಸಂಬಂಧ ಸಮತಿ ರಚಿಸಲಾಗಿದ್ದು, ಉದ್ಯಮಿಗಳು ಮತ್ತು ಕಾರ್ಪೋರೇಟ್ ವಲಯದ ಮುಖಂಡರ ಜೊತೆ ಸಮಿತಿ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com