ಚೌಕಿಬಾಲ್ ಗಡಿ ಪ್ರದೇಶದಲ್ಲಿರುವ ಮರ್ಸಾರಿ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಉಗ್ರರು ಒಳ ನುಸುಳುತ್ತಿರುವ ಮಾಹಿತಿ ತಿಳಿದ ಯೋಧರು, ಕಾರ್ಯಾಚರಣೆಗೆ ಮುಂದಾದಾಗ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಯೋಧರು ಮೃತಪಟ್ಟಿದ್ದು, ಇನ್ನು ನಾಲ್ವರು ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.