ಜೆಎನ್‍ಯು ವಿವಾದ: ಕನ್ಹಯ್ಯಾ ವಿಚಾರಣೆ ವೇಳೆ ಹಾಜರಿ ಸಂಖ್ಯೆಗೆ ಮಿತಿ ಹೇರಿದ ಸುಪ್ರೀಂ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು) ಆವರಣದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ದೇಶ ವಿರೋಧಿ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಪಡಿಸಲಾಗಿರುವ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ...
ಜೆಎನ್‍ಯು ವಿವಾದ: ಕನ್ಹಯ್ಯಾ ವಿಚಾರಣೆ ವೇಳೆ ಹಾಜರಿ ಸಂಖ್ಯೆಗೆ ಮಿತಿ ಹೇರಿದ ಸುಪ್ರೀಂ
ಜೆಎನ್‍ಯು ವಿವಾದ: ಕನ್ಹಯ್ಯಾ ವಿಚಾರಣೆ ವೇಳೆ ಹಾಜರಿ ಸಂಖ್ಯೆಗೆ ಮಿತಿ ಹೇರಿದ ಸುಪ್ರೀಂ
Updated on: 
ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು) ಆವರಣದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ದೇಶ ವಿರೋಧಿ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಪಡಿಸಲಾಗಿರುವ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಕೋಣೆಯಲ್ಲಿ ಹಾಜರಿ ಸಂಖ್ಯೆಗೆ ಸುಪ್ರೀಂಕೋರ್ಟ್ ಮಿತಿ ಹೇರಿದೆ. 
ಕಳೆದೆರಡು ದಿನಗಳ ಹಿಂದಷ್ಟೇ ನಡೆದ ವಿಚಾರಣೆ ವೇಳೆ ನ್ಯಾಯಾಲಯದ ಆವರಣದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಮೇಲೆ ವಕೀಲರ ವೇಷದಲ್ಲಿದ್ದವರು ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ  ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ಹಾಗೂ ನ್ಯಾಯಮೂರ್ಥಿ ಅಭಯ್ ಮನೋಹರ್ ಸಪ್ರೆ ಅವರಿದ್ದ ಪೀಠ ನ್ಯಾಯಾಲಯ ಪ್ರವೇಶ ಹಾಜರಾತಿ ಸಂಖ್ಯೆಗೆ ಮಿತಿ ಹೇರುವ ಆದೇಶವನ್ನು ನೀಡಿದೆ.
ಪೀಠ ಹೊರಡಿಸಿರುವ ಆದೇಶದಂತೆ ಇದೀಗ ವಿಚಾರಣೆ ವೇಳೆ ನ್ಯಾಯಾಲಯದ ಕೋಣೆಯಲ್ಲಿ ಕೇವಲ ಐವರು ಪತ್ರಕರ್ತರು, 25 ಮಾಧ್ಯಮ ವರದಿಗಾರರು ಹಾಗೂ ಇಬ್ಬರು ಕುಮಾರ್ ಬೆಂಬಲಿಗರು ಮಾತ್ರ ಅವರ ಬೆಂಬಲಿಗರು ಮಾತ್ರ ಇರಬೇಕೆಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com