ಒಡಿಶಾ: ಮೊಸಳೆಗೆ ಮಹಿಳೆ ಬಲಿ

ಒಡಿಶಾದ ಕ್ರೇಂದ್ರಾಪುರ ಜಿಲ್ಲೆಯ ಭೀತರ್ಕಾನಿಕಾ ರಾಷ್ಟ್ರೀಯ ಉದ್ಯಾನವನ ಸಮೀಪದ ನದಿಯಲ್ಲಿ ಮಹಿಳೆಯೊಬ್ಬಳನ್ನು ಮೊಸಳೆ ಹಿಡಿದಿದೆ ಎಂದು ಅರಣ್ಯಾಧಿಕಾರಿಗಳು...
ಮೊಸಳೆ(ಸಂಗ್ರಹ ಚಿತ್ರ)
ಮೊಸಳೆ(ಸಂಗ್ರಹ ಚಿತ್ರ)
Updated on: 

ಕೇಂದ್ರಾಪುರ: ಒಡಿಶಾದ ಕ್ರೇಂದ್ರಾಪುರ ಜಿಲ್ಲೆಯ ಭೀತರ್ಕಾನಿಕಾ ರಾಷ್ಟ್ರೀಯ ಉದ್ಯಾನವನ ಸಮೀಪದ ನದಿಯಲ್ಲಿ ಮಹಿಳೆಯೊಬ್ಬಳನ್ನು ಮೊಸಳೆ ಹಿಡಿದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಬಲರಾಮ್ ಪುರ ಗ್ರಾಮದ 58 ವರ್ಷದ ಚಾಯಮನಿ ಬಾಗ್ ಪೇಠಶಾಲ ನದಿ ಬಳಿ ದನಗಳಿಗೆ ನೀರು ಕುಡಿಸಲು ನೀರಿಗೆ ಉಳಿದ್ದ ಸಂದರ್ಭದಲ್ಲಿ ದಿಢೀರ್ ದಾಳಿ ಮಾಡಿದ ಮೊಸಳೆ ಆಕೆಯನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಯಾದ 45 ವರ್ಷದ ಭಾರತಿ ಮಂಡಲ್ ಹಳ್ಳಿಗರಿಗೆ ತಿಳಿಸಿದ್ದಾರೆ.

ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಮೃತ ಚಾಯಮನಿ ಬಾಗ್ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆಯನ್ನು ವಿಭಾಗೀಯ ಅರಣ್ಯಾಧಿಕಾರಿ ಭೀಮಲ್ ಪ್ರಸನ್ನ ಆಚಾರ್ಯ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com