ಕನಯ್ಯಾ ಕುಮಾರ್ ಫೇಸ್‌ಬುಕ್ ಹ್ಯಾಕ್ ಮಾಡಿ ಪ್ರೊಫೈಲ್ ಫೋಟೋದಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಿದರು!

ಶನಿವಾರ ರಾತ್ರಿ 8. 40ಕ್ಕೆ ಕನಯ್ಯಾ ಕುಮಾರ್ ಅವರ ಫೇಸ್‌ಬುಕ್ ಪ್ರೊಫೈಲ್ ಫೋಟೋ ಅಪ್‌ಡೇಟ್ ಆಗಿರುವುದಾಗಿ ಕಂಡು ಬಂದಿತ್ತು. ಸೈನಿಕರ ಗುಂಪೊಂದು ರಾಷ್ಟ್ರಧ್ವಜವನ್ನು...
ಕನಯ್ಯಾ ಕುಮಾರ್ ಅವರ ಫೇಸ್‌ಬುಕ್ ಪ್ರೊಫೈಲ್ ಫೋಟೋ
ಕನಯ್ಯಾ ಕುಮಾರ್ ಅವರ ಫೇಸ್‌ಬುಕ್ ಪ್ರೊಫೈಲ್ ಫೋಟೋ
ನವದೆಹಲಿ: ದೇಶದ್ರೋಹದ ಆರೋಪದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿದೆ.
ಶನಿವಾರ ರಾತ್ರಿ 8. 40ಕ್ಕೆ ಕನಯ್ಯಾ ಕುಮಾರ್ ಅವರ ಫೇಸ್‌ಬುಕ್ ಪ್ರೊಫೈಲ್ ಫೋಟೋ  ಅಪ್‌ಡೇಟ್ ಆಗಿರುವುದಾಗಿ ಕಂಡು ಬಂದಿತ್ತು. ಸೈನಿಕರ ಗುಂಪೊಂದು ರಾಷ್ಟ್ರಧ್ವಜವನ್ನು ಹಾರಿಸುತ್ತಿರುವ ಪ್ರೊಫೈಲ್ ಫೋಟೋವನ್ನು ಅಲ್ಲಿ ಅಪ್‌ಡೇಟ್ ಮಾಡಲಾಗಿದ್ದು, ಅಪ್‌ಡೇಟ್ ಆದ ಒಂದು ಗಂಟೆಯಲ್ಲಿ ಈ ಫೋಟೋಗೆ 600 ಕಾಮೆಂಟ್‌ಗಳು ಬಂದಿವೆ. 
ಪ್ರಸ್ತುತ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುವುದಕ್ಕಾಗಿಯೇ ಕನಯ್ಯಾ ಅವರ ಫೇಸ್‌ಬುಕ್ ಅಕೌಂಟ್‌ನ್ನು ಹ್ಯಾಕ್ ಮಾಡಲಾಗಿದೆ ಎಂದು ಕನಯ್ಯಾ ಅವರ ಬಿಡುಗಡೆಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳು ಹೇಳಿದ್ದಾರೆ. ಏತನ್ಮಧ್ಯೆ, ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ದೆಹಲಿ ಪೊಲೀಸ್ ಸೈಬರ್ ಸೆಲ್‌ಗೆ ದೂರು  ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕದ ಯೋಧರು ಅಮೆರಿಕ ಪತಾಕೆಯನ್ನು ಹಾರಿಸುವ ಫೋಟೋವನ್ನು ಜೋ ರೊಸೆಂಥಾಲ್ ಎಂಬವರು ಕ್ಲಿಕ್ಕಿಸಿದ್ದರು. ರೈಸಿಂಗ್ ದ ಫ್ಲಾಗ್ ಆನ್ ಇವೋ ಜಿಮಾ ಎಂಬ ಹೆಸರಿನಲ್ಲಿ ಈ ಫೋಟೋ ವಿಖ್ಯಾತವಾಗಿತ್ತು. ಅದೇ ಫೋಟೋವನ್ನು ತೆಗೆದುಕೊಂಡು ಅಮೆರಿಕದ ಪತಾಕೆ ಬದಲು ಅಲ್ಲಿ ಭಾರತದ ರಾಷ್ಟ್ರಧ್ವಜವನ್ನು ಎಡಿಟ್ ಮಾಡಿ ಆ ಫೋಟೋವನ್ನು ಹ್ಯಾಕರ್‌ಗಳು ಕನಯ್ಯಾ ಅವರ ಪ್ರೊಫೈಲ್ ಫೋಟೋ ಆಗಿ ಅಪ್‌ಡೇಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com