ಸಿಯಾಚಿನ್ ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ: ಮನೋಹರ್ ಪರಿಕ್ಕರ್

ಸಿಯಾಚಿನ್ ನಿಂದ ಸೇನೆಯನ್ನು ತೆರವುಗೊಳಿಸುವುದಿಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಂಸತ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಮನೋಹರ್ ಪರಿಕ್ಕರ್,
ಮನೋಹರ್ ಪರಿಕ್ಕರ್,
Updated on: 

ನವದೆಹಲಿ: ಸಿಯಾಚಿನ್ ನಿಂದ ಸೇನೆಯನ್ನು ತೆರವುಗೊಳಿಸುವುದಿಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಂಸತ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಿಯಾಚಿನ್ ನಿಂದ ಸೇನೆ ಹಿಂದೆ ಬಂದರೆ ಶತೃಗಳು ಅದನ್ನು ಅತಿಕ್ರಮಣ ಮಾಡಿ ಆಯಕಟ್ಟಿನ ಪ್ರದೇಶದ ಅನುಕೂಲತೆ ಪಡೆಯುವ ಸಾಧ್ಯತೆ ಇದೆ, ಆದ್ದರಿಂದ ಸಿಯಾಚಿನ್ ನಿಂದ ಸೇನೆಯನ್ನು ತೆರವುಗೊಳಿಸುವುದಿಲ್ಲ ಎಂದು ಪರಿಕ್ಕರ್ ಹೇಳಿದ್ದಾರೆ. ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ವಂದಿಸುತ್ತೇನೆ. ಗಡಿ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಆಯಕಟ್ಟಿನ ದೃಷ್ಟಿಯಿಂದ ಸಿಯಾಚಿನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪರಿಕ್ಕರ್ ಸಂಸತ್ ಗೆ ತಿಳಿಸಿದ್ದಾರೆ. ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ವಿಷಯದ ಬಗ್ಗೆ ಮಾತನಾಡಿದ್ದ ಪಾಕಿಸ್ತಾನ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಉಭಯ ದೇಶಗಳ ಪ್ರಧಾನಿಗಳು ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ ಆದ್ದರಿಂದ ಸಿಯಾಚಿನ್ ನಲ್ಲಿರುವ ಸೇನಾ ಪಡೆಗಳನ್ನು ಭಾರತ-ಪಾಕಿಸ್ತಾನ ಹಿಂಪಡೆದುಕೊಳ್ಳಬಹುದು ಎಂದು ಹೇಳಿದ್ದರು. 
ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಸಾಮಾನ್ಯ ವೈದ್ಯಕೀಯ ಸೌಲಭ್ಯಕ್ಕಿಂತಲೂ 6 ಪಟ್ಟು ಹೆಚ್ಚು ಸೌಲಭ್ಯ ಒದಗಿಸುತ್ತಿದ್ದೇವೆ. ಅಲ್ಲಿನ ಯೋಧರಿಗೆ ಒಟ್ಟಾರೆ 19 ರೀತಿಯ ಉಡುಪುಗಳನ್ನು ಒದಗಿಸಲಾಗುತ್ತಿದೆ ಎಂದು ಸಂಸತ್ ಗೆ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com