ದಾಳಿ ಸ್ಥಳದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು, ರೈಫಲ್‍ಗಳು, ರಾಕೆಟ್ ಲಾಂಚರ್‍ಗಳು ಸಿಕ್ಕಿವೆ. ಅವರ ಗುಂಡಿನ ದಾಳಿಯ ಶೈಲಿ, ಅಲರ್ಟ್ ನೆಸ್ ಕಡಿಮೆಯಿದ್ದಂತಹ ಸಮಯದಲ್ಲಿ ಅಂದರೆ ಮುಂಜಾನೆ 3 ಗಂಟೆ ವೇಳೆ ದಾಳಿ ನಡೆಸುವುದು, ಎಲ್ಲರೂ ಸತ್ತರು ಎಂದು ಭಾಸವಾಗುವಂತೆ ಮೌನವಾಗಿ ಸಂಚರಿಸುವುದು, ಶಸ್ತ್ರರಹಿತರು ಹೆಚ್ಚಿರುವ ಪ್ರದೇಶದಲ್ಲಿ ಗುಂಡು ಹಾರಿಸುವುದು ಮತ್ತಿತರ ಕಾರ್ಯತಂತ್ರಗಳು ಉಗ್ರರಿಗಿದ್ದ ಸೇನಾ ಮಾದರಿ ಚಾಕಚಕ್ಯತೆಯನ್ನು ತೋರಿಸಿತು ಎಂದಿವೆ ಮೂಲಗಳು.