

ಚೆನ್ನೈ: ಸಂಕ್ರಾಂತಿ ಹಬ್ಬ ತಮಿಳುನಾಡಿನಲ್ಲಿ ಪೊಂಗಲ್ ಎಂದೇ ಜನಪ್ರಿಯ. ಈ ಹಬ್ಬದ ಉಡುಗೊರೆಯಾಗಿ ಮುಖ್ಯಮಂತ್ರಿ ಜಯಲಲಿತಾ ಸರ್ಕಾರ ರೇಷನ್ ಕಾರ್ಡು ಹೊಂದಿರುವವರಿಗೆ 100 ರೂಪಾಯಿ ನಗದು, ಒಂದು ಕೆಜಿ ಅಕ್ಕಿ, ಸಕ್ಕರೆ ಮತ್ತು ಎರಡು ಫೀಟ್ ಉದ್ದದ ಕಬ್ಬನ್ನು ನೀಡುತ್ತಿದೆ.
ರಾಜ್ಯದ 1.91 ಕೋಟಿ ಬಿಪಿಎಲ್ ಕಾರ್ಡುದಾರರಿಗೆ ಪೊಂಗಲ್ ಕೊಡುಗೆ ನೀಡಲಾಗುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 318 ಕೋಟಿ ರೂಪಾಯಿ ಹೊರೆ ಬೀಳಲಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಜಯಲಲಿತಾ, ಅಕ್ಕಿಯನ್ನು ಪಡೆಯಲು ಅರ್ಹತೆ ಪಡೆದಿರುವ ರೇಷನ್ ಕಾರ್ಡುದಾರರು, ಶ್ರೀಲಂಕಾ ತಮಿಳರು ಮತ್ತು ಕಾರ್ಡು ಹೊಂದಿರುವ ಪೊಲೀಸ್ ಸಿಬ್ಬಂದಿಗಳು ಈ ಕೊಡುಗೆ ಪಡೆಯಲು ಅರ್ಹರಾಗಿರುತ್ತಾರೆ.ನ್ಯಾಯಬೆಲೆ ಅಂಗಡಿಗಳಲ್ಲಿ ಈ ಪೊಂಗಲ್ ಗಿಫ್ಟ್ ನ್ನು ಹಂಚಲಾಗುತ್ತದೆ ಎಂದು ಜಯಲಲಿತಾ ತಿಳಿಸಿದ್ದಾರೆ.