

ಲಂಡನ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತ ಗೊಂದಲಗಳಿಗೆ ಮಹಾತ್ಮ ಗಾಂಧೀಜಿ ಅವರೇ ಕಾರಣ ಎಂದು ಲಂಡನ್‍ನ ವೆಬ್‍ಸೈಟ್‍ವೊಂದು ವರದಿ ಮಾಡಿದೆ.
ತೈವಾನ್‍ನ ವಿಮಾನ ದುರಂತದಲ್ಲಿ ಬೋಸ್ ಮೃತಪಟ್ಟರು ಎಂಬ ವಿಚಾರ ಬಹಿರಂಗವಾದ ಐದು ತಿಂಗಳ ನಂತರ 1946 ಜನವರಿಯಲ್ಲಿ ಗಾಂಧೀಜಿ ಅವರು `` ಬೋಸ್ ಬದುಕಿದ್ದಾರೆ.
ಸೂಕ್ತ ಸಮಯದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ,'' ಎಂದು ಹೇಳಿ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳಲ್ಲಿ ಗೊಂದಲ ಮೂಡಿಸಿದ್ದರು ಎಂದು ವೆಬ್‍ಸೈಟ್ ಹೇಳಿದೆ. ಅದೇ ವರ್ಷ ಮಾರ್ಚ್‍ನಲ್ಲಿ ಅವರು `ಹರಿಜನ' ಪತ್ರಿಕೆಯಲ್ಲಿ `` ಬೋಸ್ ಬದುಕಿದ್ದಾರೆ ಎಂದು ನನಗೆ ಅನಿಸಿತ್ತು,'' ಎಂದು ಹೇಳಿ ಮತ್ತೊಮ್ಮೆ ಗೊಂದಲಕ್ಕೆ ಸೃಷ್ಟಿಸಿದ್ದರು ಎಂದು ಅದು ಹೇಳಿದೆ.