ಕಳೆದ ವರ್ಷ ಡಿಸೆಂಬರ್ 28ರಂದು ಕಾಂಗ್ರೆಸ್ನ 131ನೇ ಸ್ಥಾಪನಾ ದಿನದ ಅಂಗವಾಗಿ ಕಾಂಗ್ರೆಸ್ ಮುಖವಾಣಿ ‘ಕಾಂಗ್ರೆಸ್ ದರ್ಶನ’ದಲ್ಲಿ ಲೇಖನ ಪ್ರಕಟವಾಗಿತ್ತು. ಈ ಲೇಖನವು ಕಾಶ್ಮೀರ, ಚೀನಾ ಮತ್ತು ಟಿಬೆಟ್ ವಿವಾದಗಳಿಗೆ ಮಾಜಿ ಪ್ರಧಾನಿ ದಿ. ನೆಹರೂ ಅವರೇ ಕಾರಣ ಎಂದು ತಿಳಿಸಿತ್ತು. ಅಲ್ಲದೆ ಸೋನಿಯಾ ಗಾಂಧಿ ತಂದೆ ಸ್ಟೀಫನೋ ಮೈನೋ ಅವರು ‘ಫ್ಯಾಸಿಸ್ಟ್ ಯೋಧ’ರಾಗಿದ್ದರು ಎಂದು ಹೇಳಿತ್ತು.