ಪಂಜಾಬ್: ಪಲ್ರ್ಸ್ ಗ್ರೂಪ್‍ನ ಬಹುಕೋಟಿ ಹಗರಣದಲ್ಲಿ ಕ್ರಿಕೆಟರ್‍ಗಳಾದ ಯುವರಾಜ್ ಸಿಂಗ್ ಮತ್ತು ಹರ್ಬಜನ್ ಸಿಂಗ್ ಅವರ ಹೆಸರುಗಳು ಕೇಳಿ ಬಂದಿದೆ.
ಹೀಗಾಗಿ ಇಬ್ಬರ ಆಸ್ತಿಯನ್ನು ಸಿಬಿಐ ಅಧಿಕಾರಿಗಳು ಪರಿಶೀಲನೆಗೊಳಪಡಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಕ್ರಿಕೆಟ್‍ಕಂಟ್ರಿ.ಕಾಂ (http://www.cricketcountry.com) ವರದಿ ಮಾಡಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಪಲ್ರ್ಸ್ ಗ್ರೂಪನ ಮುಖ್ಯಸ್ಥ ನಿರ್ಮಲ್ ಸಿಂಗ್ ಭಂಗೂರನ್ನು ವಾರದ ಹಿಂದಷ್ಟೇ ಸಿಬಿಐ ಬಂಧಿಸಿತ್ತು. ಕಂಪನಿಗೆ, ಸಿನಿಮಾ ಮತ್ತು ಕ್ರಿಕೆಟ್ ರಂಗದ ಸೆಲೆಬ್ರಿಟಿಗೊಳೊಂದಿಗೆ ನಂಟಿದೆ ಎಂಬುದನ್ನು ಸಿಬಿಐ ಕಂಡುಕೊಂಡಿತ್ತು.
ಇದರಲ್ಲಿ ಯುವಿ, ಭಜ್ಜಿ ಹೆಸರೂ ಇದೆ. ಯುವಿ, ಭಜ್ಜಿ ಪಲ್ರ್ಸ್ ಗ್ರೂಪನಿಂದ ಮೊಹಾಲಿಯಲ್ಲಿ ಫ್ಲಾಟ್ ಉಡುಗೊರೆ ಪಡೆದಿದ್ದಾರೆ ಎನ್ನಲಾಗಿದೆ.