ಪಠಾಣ್ ಕೋಟ್ ದಾಳಿಯ ಆರು ಭಯೋತ್ಪಾದಕರ ಪೈಕಿ ಇಬ್ಬರು 'ಒಳಗಿನವರು'?: ಎನ್ಐಎ ಶಂಕೆ

ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ 6 ಭಯೋತ್ಪಾದಕರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ
ಪಠಾಣ್ ಜೊತ ದಾಳಿ ವೇಳೆ ಯೋಧರು(ಸಾಂಕೇತಿಕ ಚಿತ್ರ)
ಪಠಾಣ್ ಜೊತ ದಾಳಿ ವೇಳೆ ಯೋಧರು(ಸಾಂಕೇತಿಕ ಚಿತ್ರ)
Updated on: 

ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ 6 ಭಯೋತ್ಪಾದಕರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ ಎಂದು ತನಿಖಾ ತಂಡ ಎನ್ಐಎ ಶಂಕೆ ವ್ಯಕ್ತಪಡಿಸಿರುವುದನ್ನು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ದಾಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮುಂದಿನ ವಾರ ಬರಲಿದ್ದು,  ದಾಳಿ ನಡೆದ ಪ್ರದೇಶದಿಂದ ಮಾಡಲಾಗಿರುವ ಅಥವಾ ಸ್ವೀಕರಿಸಲಾಗಿರುವ ಕರೆ ಮಾಹಿತಿ ಹಾಗೂ ಏರ್ ಫೋರ್ಸ್ ಸ್ಟೇಷನ್ ಸಿಬ್ಬಂದಿಗಳ ಕೂಲಂಕುಶ ಪರಿಶೀಲನೆ ನಂತರವಷ್ಟೇ ಶಂಕಿತ ಒಳಗಿನವರನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.     
ದಾಳಿ ನಡೆದ ಬಳಿಕ ಸರ್ಕಾರ ನೀಡಿದ ಹೇಳಿಕೆ ಆರು ಜನರು ವಾಯು ನೆಲೆಗೆ ಅಕ್ರಮವಾಗಿ ಪ್ರವೇಶಿಸಿರುವ ಬಗ್ಗೆ ಉಲ್ಲೇಖಿಸಿತ್ತು. ಈ ಪೈಕಿ ನಾಲ್ವರನ್ನು ಮಾತ್ರ ಪಾಕಿಸ್ತಾನದಿಂದ ಒಳನುಸುಳಿದ್ದ ಉಗ್ರರು ಎಂದು ಗುರುತಿಸಲಾಗಿತ್ತು. ಆದರೆ ಇಬ್ಬರ ಬಗೆಗಿನ ಮಾಹಿತಿ ಈ ವರೆಗೂ ಬಹಿರಂಗವಾಗಿಲ್ಲ. ಎನ್ಐಎ ಅಧಿಕಾರಿಗಳ ಪ್ರಕಾರ ಈ ಇಬ್ಬರು ಒಳಗಿನವರಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಸೇನೆಯಿಂದ ಹತರಾದ ಇಬ್ಬರು ಒಳಗಿನವರೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ವಾಯುನೆಲೆಯಲ್ಲಿರುವ ಎಲ್ಲಾ ಸಿಬ್ಬಂಧಿಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತ ಒಳಗಿನವರು ಜೆಇಎಂ ಉಗ್ರ ಗುಂಪಿಗೆ ಸೇರದವರೆಂದು ಹೇಳಲಾಗಿದ್ದು,  ಅವರ ಗುರುತನ್ನು ಪತ್ತೆಹಚ್ಚಲು ಎನ್ಐಎ ತಂಡ ವಾಯು ನೆಲೆಯಲ್ಲಿರುವ 3,500 ಜನರನ್ನು  ಕೂಲಂಕುಷ ಪರಿಶೀಲನೆಗೊಳಪಡಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com