ಬಂಧಿತರನ್ನು ಅಖ್ಲಾಕ್ ಉರ್ ರೆಹಮಾನ್, ಮೊಹಮ್ಮದ್ ಒಸಾಮಾ, ಮೊಹಮ್ಮದ್ ಅಜೀಮ್ ಶಾ ಮತ್ತು ಮೊಹಮ್ಮದ್ ಮೆಹ್‌ರಾಜ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಅಖ್ಲಾಕ್ ಭಗವಾನ್‌ಪುರ್ ಚಂದನ್‌ಪುರ್ ಗ್ರಾಮದ ನಿವಾಸಿಯಾಗಿದ್ದು, ಅಜೀಮ್ ಮತ್ತು ಮೆಹ್‌ರಾಜ್ ಲಾಂಧುರಾದವರಾಗಿದ್ದಾರೆ. ಅದೇ ವೇಳೆ ಒಸಾಮಾ ಹರಿದ್ವಾರ ಜಿಲ್ಲೆಯ ಜರೋಸಾ ಗ್ರಾಮದವನಾಗಿದ್ದಾನೆ. ಬಂಧಿತರಾದವರೆಲ್ಲ 18-22ರ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.