ರೋಹಿತ್ ವೇಮುಲಾ 'ದಲಿತ' ಅಲ್ಲ

ವಾರದ ಹಿಂದೆ ಹೈದ್ರಾಬಾದ್ ವಿವಿಯಲ್ಲಿ ಆತ್ಮಹತ್ಯೆಗೆ ಶರಣಾದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ದಲಿತ ಅಲ್ಲ...
Rohith Vemula
Rohith Vemula
Updated on: 
ನವದೆಹಲಿ: ವಾರದ ಹಿಂದೆ ಹೈದ್ರಾಬಾದ್ ವಿವಿಯಲ್ಲಿ ಆತ್ಮಹತ್ಯೆಗೆ ಶರಣಾದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ದಲಿತ ಅಲ್ಲ, ಆತ ಒಬಿಸಿ ಎಂಬ ಮಾಹಿತಿ ಲಭಿಸಿರುವ ಬಗ್ಗೆ ಸುದ್ದಿಯಾಗಿದೆ.
ಸುದ್ದಿ ಮಾಧ್ಯಮವೊಂದರ ವರದಿ ಪ್ರಕಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ ತನಿಖೆಯಲ್ಲಿ ರೋಹಿತ್ ಅವರ ಜಾತಿ ಬಹಿರಂಗವಾಗಿದೆ. ರೋಹಿತ್ ಅವರ ಹೆತ್ತವರು ಕಲ್ಲು ಕುಟಿಗ ವಡೇರಾ ಜಾತಿಯವರಾಗಿದ್ದಾರೆ. ಈ ಜಾತಿ ಇತರ ಹಿಂದುಳಿದ ವರ್ಗ (ಒಬಿಸಿ) ಗೆ ಸೇರಿದೆ.
ಆದರೆ ರೋಹಿತ್‌ನ ಹೆತ್ತವರು ಹೇಗೆ ಎಸ್‌ಸಿ ಎಸ್‌ಟಿ ಜಾತಿ ಪ್ರಮಾಣಪತ್ರ ಪಡೆದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುಂಟೂರ್ ಜಿಲ್ಲೆಯಲ್ಲಿ ಮಾಲಾ ಸಮುದಾಯದ ವೇಮುಲಾ ಜಾತಿಗೆ ಸೇರಿರುವರೆಂದು ಜಾತಿಪ್ರಮಾಣ ನೀಡಲಾಗಿದೆ. ಮಾಲಾ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದ್ದಾಗಿದೆ.
ರೋಹಿತ್ ಯಾವ ಜಾತಿಯವನು ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. ಆದರೆ ಒತ್ತಾಯಿಸಿದ್ದು ಯಾರು ಎಂಬುದರ ಬಗ್ಗೆ ಪೊಲೀಸರು ಬಹಿರಂಗ ಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com