ಪಹರಿ ಮಂದಿರ್‌ನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಹಾರಿಸುವ ಮೂಲಕ ನೇತಾಜಿ ಸ್ಮರಣೆ

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ 118ನೇ ಜನ್ಮದಿನಾಚರಣೆಯನ್ನು ಶನಿವಾರ ಆಚರಿಸುತ್ತಿದ್ದು, ಜಾರ್ಖಂಡ್‌ನ ಪಹರಿ ಮಂದಿರ್‌ನಲ್ಲಿ...
ರಾಷ್ಟ್ರಧ್ವಜ
ರಾಷ್ಟ್ರಧ್ವಜ
Updated on: 
ರಾಂಚಿ: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ 118ನೇ ಜನ್ಮದಿನಾಚರಣೆಯನ್ನು ಶನಿವಾರ ಆಚರಿಸುತ್ತಿದ್ದು, ಜಾರ್ಖಂಡ್‌ನ ಪಹರಿ ಮಂದಿರ್‌ನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಹಾರಿಸುವ ಮೂಲಕ ನೇತಾಜಿಯವರನ್ನು ಸ್ಮರಿಸಲಾಗುತ್ತಿದೆ.
98 ಅಡಿX 66 ಅಡಿಯಿರುವ ಈ ಬೃಹತ್ ರಾಷ್ಟ್ರಧ್ವಜವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಹಣ ಮಾಡಲಿದ್ದಾರೆ.
ಸ್ವಾತಂತ್ರ್ಯ ಪೂರ್ವ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು  ನೇಣಿಗೆ ಹಾಕುತ್ತಿದ್ದ ಫಾನ್ಸಿ ತೋಂಗ್ರಿ ಎಂಬ ಪ್ರದೇಶವೇ ಈಗ ಪಹರಿ ಮಂದಿರ್ ಎಂದು ಕರೆಯಲ್ಪಡುತ್ತದೆ.
ಅದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನೇತಾಜಿಯವರಿಗೆ ಸಂಬಂಧಿಸಿದ ದಾಖಲೆಗಳು 100 ಪ್ರತಿಗಳನ್ನು ಇಂದು ಬಿಡುಗಡೆ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com