ನವದೆಹಲಿ: ಜನತೆ ಏನು ಮಾಡಬೇಕು ಅಥವಾ ಏನು ಮಾಡದಿರಬೇಕೆಂದಿರುತ್ತಾರೋ ಅದರ ಬಗ್ಗೆ ಸರ್ಕಾರದ ಪಾತ್ರ ಇರಬಾರದು ಎಂದು ಖ್ಯಾತ ಉದ್ಯಮಿ ರತನ್ ಟಾಟಾ ಹೇಳಿದ್ದಾರೆ.
ಈ ಮೂಲಕ ದೇಶಾದ್ಯಂತ ಅಸಹಿಷ್ಣುತೆ ಕುರಿತು ನಡೆಯುತ್ತಿರುವ ಚರ್ಚೆಗೆ ಟಾಟಾ ಸಮೂಹದ ರತನ್ ಟಾಟಾ ಕೂಡ ಧ್ವನಿಗೂಡಿಸಿದ್ದಾರೆ.
ವಿಶ್ವದಲ್ಲಿ ಭಾರತ ಮಿಂಚುತ್ತಿದೆ. ಭವಿಷ್ಯದತ್ತ ಮುನ್ನುಗುತ್ತಿದೆ. ಹೀಗಿರಬೇಕಾದರೆ ಜನತೆಗೆ ತಮ್ಮ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿರುತ್ತದೆ. ಇಲ್ಲಿ ಸರ್ಕಾರ ಕೇವಲ ಶಿಸ್ತು ಕಾಪಾಡಬೇಕೇ ಹೊರತು, ಜನತೆ ಏನು ಮಾಡಬೇಕು ಎಂದು ಹೇಳುವ ಹಕ್ಕಿಲ್ಲ ಎಂದು ಟಾಟಾ ಅಭಿಪ್ರಾಯಪಟ್ಟಿದ್ದಾರೆ.
ತಾವು ಏನು ಮಾಡಬೇಕು ಎಂದು ನಿರ್ಧರಿಸುವ ಅಧಿಕಾರ ಅವರಿಗವರಿಗೆ ಇರುತ್ತದೆ. ಹಾಗಾದರೇ ಮಾತ್ರ ಭಾರತ ವಿಶ್ವದಲ್ಲಿ ಮಿಂಚಲು ಸಾಧ್ಯ. ಇದರಲ್ಲಿ ಸರ್ಕಾರ ಪಾತ್ರವಹಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.