

ನವದೆಹಲಿ: ಭಾರತ ಮತ್ತು ವಿದೇಶಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ಮೂವರು ಭಾರತೀಯರನ್ನು ಗಲ್ಫ್ ನಿಂದ ಗಡಿಪಾರು ಮಾಡಲಾಗಿದೆ.
ಗಡಿಪಾರಾದವರ ಮೂವರಲ್ಲಿ ಓರ್ವ ಶಂಕಿತ ಕರ್ನಾಟಕ ಮೂಲದವನೆಂದು ತಿಳಿದುಬಂದಿದ್ದು, ಶುಕ್ರವಾರ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಉಗ್ರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇವರನ್ನು ಶೇಖ್ ಅಜರ್ ಅಲ್ ಇಸ್ಲಾಂ ಅಬ್ದುಲ್ ಸತ್ತಾರ್ ಶೇಖ್, ಮೊಹಮದ್ ಫರಾನ್ ಮೊಹಮದ್ ರಫೀಕ್ ಶೇಖ್ ಮತ್ತು ಅದ್ನಾನ್ ಹುಸೇನ್ ಮೊಹಮದ್ ಹುಸೇನ್ ಎಂದು ಗುರುತಿಸಲಾಗಿದೆ.
ಐಎಸ್ ಸೇರುವಂತೆ ಯುವಕರನ್ನು ಪ್ರೇರೇಪಿಸುವ, ನೇಮತ ಮಾಡುವ, ತರಬೇತಿ ನೀಡುವ ಕೆಲಸವನ್ನು ಇವರು ಮಾಡುತ್ತಿದ್ದರು. ಜತೆಗೆ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಎಂದು ಎನ್ ಐಎ ಹೇಳಿದೆ.