ಹಿಂದೂ ನಿರಾಶ್ರಿತರಿಗೆ ಕೇಂದ್ರ ಸರ್ಕಾರದಿಂದ ನಾಗರಿಕ ಸೌಲಭ್ಯ

ಧಾರ್ಮಿಕ ಶೋಷಣೆಗೊಳಗಾಗಿ ಡಿಸೆಂಬರ್ 31, 2014ರೊಳಗೆ ಭಾರತ ಪ್ರವೇಶಿಸಿದ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ...
ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪಾಕ್ ನಲ್ಲಿನ ಹಿಂದೂಗಳು(ಸಂಗ್ರಹ ಚಿತ್ರ)
ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪಾಕ್ ನಲ್ಲಿನ ಹಿಂದೂಗಳು(ಸಂಗ್ರಹ ಚಿತ್ರ)
Updated on: 
ನವದೆಹಲಿ: ಧಾರ್ಮಿಕ ಶೋಷಣೆಗೊಳಗಾಗಿ ಡಿಸೆಂಬರ್ 31, 2014ರೊಳಗೆ ಭಾರತ ಪ್ರವೇಶಿಸಿದ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸಾವಿರಾರು ಮಂದಿ ಹಿಂದೂ ನಿರಾಶ್ರಿತರಿಗೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಗರಿಕತೆ ಮತ್ತು ವೀಸಾ ಸೌಲಭ್ಯ ನೀಡಲಿದೆ. 
ಈ ಮೂರು ದೇಶಗಳಲ್ಲಿರುವ ಹಿಂದೂ ನಿರಾಶ್ರಿತರಿಗೆ ಭಾರತದ ಪೌರತ್ವ ಹಕ್ಕನ್ನು ನೀಡುವುದಾದಿ ಬಿಜೆಪಿ 2014ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡು ನಿರಾಶ್ರಿತರಿಗೆ ದೀರ್ಘಾವಧಿಯ ವೀಸಾ ಮತ್ತು ನಾಗರಿಕತೆ ನೀಡಲು ಮುಂದಾಗಿದೆ.
ಅದರಂತೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಹಿಂದೂ ನಿರಾಶ್ರಿತರಿಗೆ ನಾಗರಿಕತೆ ನೀಡುವ ಬಗ್ಗೆ ಘೋಷಣೆ ಮಾಡಲಾಗುವುದು. ಇದಕ್ಕೆ ವಿರೋಧ ಪಕ್ಷಗಳ ಬೆಂಬಲವೂ ಇದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಸ್ಲಿಂ ರಾಷ್ಟ್ರಗಳಿಂದ ಭಾರತಕ್ಕೆ ಮರಳಿದ ಸುಮಾರು ಎರಡೂವರೆ ಲಕ್ಷ ಹಿಂದೂ ಜನರು ಗುಜರಾತ್, ರಾಜಸ್ತಾನ, ಮಧ್ಯ ಪ್ರದೇಶ, ದೆಹಲಿ, ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಮಹಾರಾಷ್ಟ್ರಗಳಲ್ಲಿದ್ದು ಅವರು ಭಾರತೀಯ ನಾಗರಿಕತೆಯನ್ನು ಪಡೆದಿಲ್ಲ.
1955ರ ನಾಗರಿಕ ಕಾಯ್ದೆಗೆ ತಿದ್ದುಪಡಿ ತರಲು ಕಳೆದ ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರ ಪ್ರಸ್ತಾವನೆಯೊಂದನ್ನು ಮುಂದಿಟ್ಟಿತ್ತು. ಅದರಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ರಾಷ್ಟ್ರಗಳಿಂದ ಬಂದು ಭಾರತದಲ್ಲಿ ಅನೇಕ ವರ್ಷಗಳಿಂದ ನೆಲೆಸಿರುವ ನಾಗರಿಕರಿಗೆ ಪೌರತ್ವ ಹಕ್ಕು ನೀಡಬೇಕೆಂದು ಪ್ರಸ್ತಾವನೆ ಇರಿಸಲಾಗಿತ್ತು. ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದು ಮಸೂದೆ ಮಂಡಿಸುವ ಯೋಜನೆಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com