ರಕ್ಷಣೆ ಕೋರಿ ಪ್ರಧಾನಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ ಕಾಶ್ಮೀರಿ ಪಂಡಿತರು

ಕಣವೆ ರಾಜ್ಯ ಕಾಶ್ಮೀರದಲ್ಲಿ ದಿನಕಳೆಯುತ್ತಿದ್ದಂತೆ ಪರಿಸ್ಥಿತಿ ಹದಗೆಡುತ್ತಿದ್ದು, ರಕ್ಷಣೆ ನೀಡುವಂತೆ ಕೋರಿ ಕಾಶ್ಮೀರಿ ಪಂಡಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಪ್ರಧಾನಮಂತ್ರಿ ಕಚೇರಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಕಣವೆ ರಾಜ್ಯ ಕಾಶ್ಮೀರದಲ್ಲಿ ದಿನಕಳೆಯುತ್ತಿದ್ದಂತೆ ಪರಿಸ್ಥಿತಿ ಹದಗೆಡುತ್ತಿದ್ದು, ರಕ್ಷಣೆ ನೀಡುವಂತೆ ಕೋರಿ ಕಾಶ್ಮೀರಿ ಪಂಡಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಪ್ರಧಾನಮಂತ್ರಿ ಕಚೇರಿಗೆ ಮಂಗಳವಾರ ಮನವಿ ಪತ್ರವೊಂದನ್ನು ಸಲ್ಲಿಸಿದೆ.

ಆಲ್ ಇಂಡಿಯಾ ಕಾಶ್ಮೀರಿ ಸಮಾಜದ ಸರ್ವೋನ್ನತ ಮಂಡಳಿ ಕಾಶ್ಮೀರಿ ಪಂಡಿತರಿಗೆ ರಕ್ಷಣೆ ನೀಡುವಂತೆ ಕೋರಿ ಮನವಿ ಪತ್ರವೊಂದನ್ನು ಪ್ರಧಾನಿ ಕಚೇರಿ ರಾಜ್ಯ ಸಚಿವ ಡಾ.ಜಿತೇಂದರ್ ಸಿಂಗ್ ಅವರಿಗೆ ಸಲ್ಲಿಸಿದೆ. ಇದೇ ಪತ್ರದ ಮತ್ತೊಂದು ಪ್ರತಿಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರಿಗೂ ಸಲ್ಲಿಸಿದ್ದಾರೆ.

ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದ್ದು, ಕಾಶ್ಮೀರ ವಿವಿಧೆಡೆ ನೆಲೆಸಿರುವ ಪಂಡಿತರ ಶಿಬಿರಗಳನ್ನು ಹುಡುಕಿ ಕಲ್ಲಿನ ಮೂಲಕ ದಾಳಿ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಈಗಲೂ ಪಂಡಿತರು ಹಾಗೂ ಅಲ್ಪ ಸಂಖ್ಯಾತ ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.

ಇದು 1989-90ರ ಪರಿಸ್ಥಿತಿಯನ್ನು ಮತ್ತೆ ಮರುಕಳಿಸುವಂತ ಪರಿಸ್ಥಿತಿಯಂತೆ ಅನುಭವವಾಗುತ್ತಿದೆ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದ್ದು, ಕಾಶ್ಮೀರದಲ್ಲಿ ನೆಲೆಸಿರುವ ಪಂಡಿತರು ಹಾಗೂ ಅಲ್ಪಸಂಖ್ಯಾತ ಜನರಿಗೆ ರಕ್ಷಣೆ ನೀಡಬೇಕೆಂದು ಮನವಿ ಪತ್ರದಲ್ಲಿ ಹೇಳಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com