ಅಮರನಾಥ ಯಾತ್ರೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಒತ್ತಾಯಿಸಿ ಮೆರವಣಿಗೆ ಮೂಲಕ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೊಹ್ರಾ ಅವರಿಗೆ ಮನವಿ ನೀಡಲು ಮುಂದಾಗಿದ್ದ ಸುಮಾರು 100 ಶಿವಸೇನಾ ಕಾರ್ಯಕರ್ತರನ್ನು ನಾವು ಬಂಧಿಸಿದ್ದೇವೆ ಎಂದು ಕತುವಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಖಲಿಲ್ ಪೊಸ್ವಾಲ್ ಅವರು ಹೇಳಿದ್ದಾರೆ.