

ನವದೆಹಲಿ: ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೋಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದ್ರೋಣ್ ಮೂಲಕ ದಾಳಿ ನಡೆಸಲು ಉಗ್ರರ ತಂಡವೊಂದು ಸಂಚು ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಆಗಸ್ಟ್ 15 ರ ಬೆಳಗ್ಗೆ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಲಷ್ಕರ್ -ಇ-ತೋಯ್ಬಾ, ಜೈಶ್-ಇ- ಮೊಹಮದ್, ಐಸಿಸ್ ಸೇರಿದಂತೆ ಇನ್ನಿತರ ಉಗ್ರ ಸಂಘಟನೆಗಳು ಪಾಕಿಸ್ತಾನದ ಐಎಸ್ಐ ಬೆಂಬಲದೊಂದಿಗೆ ದಾಳಿ ನಡೆಸಲು ಸಂಚು ನಡೆಸುತ್ತಿವೆ.ಈ ಸಂಬಂಧ ಉಗ್ರರ ನಡುವೆ ದೂರವಾಣಿ ಮಾತುಕತೆ ನಡೆದಿದೆ ಎಂದು ಗುಪ್ತ ಚರ ಇಲಾಖೆ ತಿಳಿಸಿದೆ.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವ ವೇಳೆ ಮತ್ತಷ್ಟು ಭದ್ರತೆ ಹೆಚ್ಚಿಸಲು ವಿಶೇಷ ರಕ್ಷಣಾ ದಳಕ್ಕೆ ಸೂಚಿಸಲಾಗಿದೆ. ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿದ್ದಾರೆ.ಮೋದಿ ಭಾಷಣ ಮಾಡುವ ಜಾಗದಲ್ಲಿ ಬುಲೆಟ್ ಪ್ರೂಫ್ ಮೇಲ್ಚಾವಣಿ ನಿರ್ಮಿಸಲು ನಿರ್ಧರಿಸಲಾಗಿದೆ.
ಇದಲ್ಲದೇ ದೇಶದ ಸೇನಾ ನೆಲೆ, ಮತ್ತು ಭಾರತೀಯ ಆರ್ಮಿ ಕ್ಯಾಂಪ್ ಗಳ ಮೇಲೂ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ನಡೆಸಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.