ಗುಲ್ಬರ್ಗ್ ಹತ್ಯಾಕಾಂಡ: ಜೂನ್ 9ಕ್ಕೆ ಶಿಕ್ಷೆ ಪ್ರಮಾಣ ಘೋಷಣೆ ಮುಂದೂಡಿಕೆ

ಗೋದ್ರೋತ್ತರ ಹಿಂಸಾಚಾರದ ವೇಳೆ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದಿದ್ದ ಹತ್ಯಾಕಾಂಡ ಪ್ರಕರಣದ ಅಪರಾಧಿಗಳ ಶಿಕ್ಷೆ ಪ್ರಮಾಣ ಘೋಷಣೆಯನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಜೂನ್ 9ಕ್ಕೆ ಮುಂದೂಡಿದೆ.
ಗುಲ್ಬರ್ಗ್ ಹತ್ಯಾಕಾಂಡ (ಸಂಗ್ರಹ ಚಿತ್ರ)
ಗುಲ್ಬರ್ಗ್ ಹತ್ಯಾಕಾಂಡ (ಸಂಗ್ರಹ ಚಿತ್ರ)

ಅಹ್ಮದಾಬಾದ್: ಗೋದ್ರೋತ್ತರ ಹಿಂಸಾಚಾರದ ವೇಳೆ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದಿದ್ದ ಹತ್ಯಾಕಾಂಡ ಪ್ರಕರಣದ ಅಪರಾಧಿಗಳ ಶಿಕ್ಷೆ ಪ್ರಮಾಣ ಘೋಷಣೆಯನ್ನು ಅಹ್ಮದಾಬಾದ್ ವಿಶೇಷ  ನ್ಯಾಯಾಲಯ ಜೂನ್ 9ಕ್ಕೆ ಮುಂದೂಡಿದೆ.

2002ರ ಗುಜರಾತ್ ಹಿಂಸಾಚಾರ ವೇಳೆ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ  ಆರೋಪಿಗಳ ಪರ-ವಿರೋಧ ವಕೀಲರ ವಾದಗಳನ್ನು ಆಲಿಸಿದ ಅಹ್ಮದಾಬಾದ್ ವಿಶೇಷ ನ್ಯಾಯಾಲಯದ ಶಿಕ್ಷೆ ಪ್ರಮಾಣದ ಘೋಷಣೆಯನ್ನು ಇದೇ ಗುರುವಾರ ಜೂನ್ 9ಕ್ಕೆ ಮುಂದೂಡಿದೆ.  ಪ್ರಕರಣ ಸಂಬಂಧ ಉಭಯ ವಕೀಲರ ವಾದ ಆಲಿಸಿದ ವಿಶೇಷ ನ್ಯಾಯಮೂರ್ತಿ ಪಿಬಿ ದೇಸಾಯಿ ಅವರು ಆರೋಪಿಗಳಿಗೆ ಶಿಕ್ಷೆ ಪ್ರಮಾಣವನ್ನು ಜೂನ್ 9ಕ್ಕೆ ಘೋಷಣೆ ಮಾಡುವುದಾಗಿ ಹೇಳಿ  ನ್ಯಾಯಾಲಯದ ಕಲಾಪವನ್ನು ಮುಂದೂಡಿದರು.

ಇದಕ್ಕೂ ಮೊದಲು ತಮ್ಮ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಪರ ವಕೀಲ ಎಸ್ ಎಂ ವೋರ್ಹಾ ಅವರು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇವರಿಗೆ ನೀಡುವ ಶಿಕ್ಷೆ ಇತರರಿಗೆ  ಮಾದರಿಯಾಗಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ಪ್ರಕರಣ ಸಂಬಂಧ ಕಳೆದ ಗುರುವಾರ ತನ್ನ ಅಂತಿಮ ತೀರ್ಪು ನೀಡಿದ್ದ ನ್ಯಾಯಾಲಯ ಒಟ್ಟು 50 ಮಂದಿ ಆರೋಪಿಗಳ ಪೈಕಿ 36 ಮಂದಿಯನ್ನು ಸಾಕ್ಷ್ಯಾಧಾರದ ಕೊರತೆಯಿಂದಾಗಿ ಖುಲಾಸೆ  ಮಾಡಿ 24 ಮಂದಿ ಆರೋಪಗಳು ಎಂದು ಘೋಷಿಸಿತ್ತು. ಈ ಪೈಕಿ 11 ಆರೋಪಿಗಳ ವಿರುದ್ಧ ಕೊಲೆ ಆರೋಪ ದಾಖಲಾಗಿದ್ದು, ಉಳಿದ 13 ಮಂದಿಯ ವಿರುದ್ಧ ಇತರೆ ಆರೋಪಗಳು  ಸಾಬೀತಾಗಿದ್ದವು.

2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹತ್ಯಾಕಾಂಡಗಳಲ್ಲಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಮುಖ ಪ್ರಕರಣವಾಗಿದೆ. ಈ ಹತ್ಯಾಕಾಂಡದಲ್ಲಿ  ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು  69 ಮಂದಿಯನ್ನು ಧಾರುಣವಾಗಿ ಕೊಲ್ಲಲಾಗಿತ್ತು. ಈವರೆಗೂ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನಾಲ್ಕು ಮಂದಿ  ನ್ಯಾಯಾಧೀಶರ ಬದಲಾವಣೆಯಾಗಿದ್ದು, ಇಂದು ತೀರ್ಪು ನೀಡಿರುವ ನ್ಯಾ. ಪಿಬಿ ದೇಸಾಯಿ 5ನೇ ನ್ಯಾಯಾಧೀಶರಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ದೇಸಾಯಿ ಅವರು ಪ್ರಕರಣದ ವಿಚಾರಣೆ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com