ಬೆಳ್ಳಂಬೆಳಗ್ಗೆ ಹ್ಯುಂಡಾಯ್ ಶೋ ರೂಂ ನಿಂದ 7 ಕಾರು ಕದ್ದು ಪರಾರಿಯಾದ ಕಳ್ಳರು

ಚೆನ್ನೈ: ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಹ್ಯುಂಡಾಯ್ ಶೋ ರೂಂ ನಿಂದ ಬೆಳ್ಳಂಬೆಳಗ್ಗೆ ದರೋಡೆ ಕೋರರು 7 ಹೊಸ ಕಾರುಗಳನ್ನು ಕದ್ದು ಪರಾರಿಯಾಗಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ.
ಬೆಳಗ್ಗೆ 4 ಗಂಟೆ ಸುಮಾರಿಗೆ ಯಾರೋ ಕಲ್ಲು ಹೊಡೆದರು. ಯಾರು ಇರಬಹುದೆಂದು ಪರಿಕ್ಷೀಸಲು ಬಾಗಿಲು ತೆರೆದ ತಕ್ಷಣ ಒಳ ನುಗ್ಗಿದ ದರೋಡೆಕೋರರ ತಂಡ, ಮನೋಹರನ್ ಎಂಬ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಕಾರುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಪೊಲೀಸರ ದಾರಿ ತಪ್ಪಿಸಲು ಕದ್ದ ಏಳು ಕಾರುಗಳಲ್ಲಿ, ಐದು ಕಾರುಗಳನ್ನು ತೆಗೆದುಕೊಂಡು ಗುಂಪಿನಲ್ಲಿದ್ದ ಕೆಲ ಆರೋಪಿಗಳು ಪರಾರಿಯಾದರೆ, ಬೇರೆ ಗುಂಪಿನಲ್ಲಿದ್ದ ಆರೋಪಿಗಳು ಮತ್ತೆರಡು ಕಾರುಗಳಲ್ಲಿ ಎಸ್ಕೇಪ್ ಆಗಿದ್ದಾರೆ.
ಇನ್ನು ಕದ್ದ ಕಾರುಗಳನ್ನು ಗಂಗಾಯ್ ಅಮ್ಮನ್ ಕೋಯಿಲ್ ರಸ್ತೆಯಲ್ಲಿ ಮ10 ರಿಂದ 17 ಲಕ್ಷಕ್ಕೆ ಬಲವಂತವಾಗಿ ಮಾರಾಟ ಮಾಡಲು ಯತ್ನಿಸಿದ್ದಾರೆ, ದರೋಡೆ ನಡೆದ ಮೂರು ಗಂಟೆಗಳಲ್ಲಿ ಪೊಲೀಸರು 5 ಕಾರುಗಳನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ.
ಇನ್ನು ಉಳಿದ ಎರಡು ಕಾರುಗಳನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ನಡೆಸಿದ್ದು, ಪ್ರಮುಖ ಆರೋಪಿಯನ್ನು ಗುರತಿಸಿದ್ದಾರೆ ಎನ್ನಲಾಗಿದೆ. ಮೊದಲು ಪೊರೂರ್ ನಲ್ಲಿದ್ದ ಹ್ಯುಂಡೈ ಶೋರೂಂ ಅನ್ನು ಕಳೆದ ಎರಡು ದಿನಗಳ ಹಿಂದೆ ಮಣಪಾಕ್ಕಂಗೆ ಸ್ಥಳಾಂತರಿಸಲಾಗಿತ್ತು.
ಇನ್ನು ಕಾರಿನ ನಂಬರ್ ಪ್ಲೇಟ್ ಗಳನ್ನು ವಲಸಾರಕ್ಕಂನ ಅಂಗಡಿಯೊಂದರಲ್ಲಿ ಖರೀದಿಸಲಾಗಿದೆ. ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ಗಂಗೈ ಅಮ್ಮಾನ್ ಕೊಯಿಲ್ ರಸ್ತೆಯಲ್ಲಿ ದರೋಡೆಕೋರರು ಕಾರುಗಳನ್ನು ಪಾರ್ಕಿಂಗ್ ಮಾಡಿದಾಗ ಸಿಕ್ಕಿಬಿದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


