ಆಪ್ ಶಾಸಕ ದಿನೇಶ್ ಮೊಹನಿಯಾ ಅನುಚಿತ ವರ್ತನೆ: ದೂರು ದಾಖಲಿಸಿದ ಮಹಿಳೆ

ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ ವಿರುದ್ಧ ದೆಹಲಿ ಮಹಿಳೆ ದೂರು ದಾಖಲಿಸಿದ್ದಾರೆ....
ದಿನೇಶ್ ಮೊಹಾನಿಯಾ
ದಿನೇಶ್ ಮೊಹಾನಿಯಾ
Updated on

ನವದೆಹಲಿ: ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ ವಿರುದ್ಧ ದೆಹಲಿ ಮಹಿಳೆ ದೂರು ದಾಖಲಿಸಿದ್ದಾರೆ.

ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲು ಮಹಿಳೆಯರು ಸಂಗಮ್ ವಿಹಾರ ಕ್ಷೇತ್ರದ ಶಾಸಕ ದಿನೇಶ್ ಮೊಹನೀಯ ಅವರನ್ನು ಭೇಟಿ ಮಾಡಲು ಕಚೇರಿಗೆ ತೆರಳಿದ್ದರು.

ನೀರಿನ ಸಮಸ್ಯೆ ಬಗೆಹರಿಸುವಂತೆ ನಾನು ಪ್ರತಿನಿತ್ಯ ಅವರನ್ನು ಭೇಟಿ ಮಾಡುತ್ತಿದ್ದೆ. ಮತ್ತೆ ನಾವೆಲ್ಲಾ ಮಹಿಳೆಯರು ಅವರ ಬಳಿ ಮನವಿ ಸಲ್ಲಿಸಲು ಶಾಸಕರ ಕಚೇರಿಗೆ ತೆರಳಿದ್ದೆವು.ಈ ವೇಳೆ ನಮ್ಮನ್ನು ನಿಂದಿಸಿ ಕಚೇರಿಯಿಂದ ಹಿಡಿದು ಆಚೆ ದಬ್ಬಿದರು. ನಾವು ಕೂಡ ಈ ವೇಳೆ ಅವರನ್ನು ಹಿಡಿದು ತಳ್ಳಿದೆವು ಎಂದು ಮಹಿಳೆ ತಿಳಿಸಿದ್ದಾರೆ.

ದಿನೇಶ್ ಮೊಹಾನಿಯಾ ಅವರನ್ನು ದೆಹಲಿ ಜಲ ನಿಗಮದ ಉಪಾಧ್ಯಕ್ಷರನ್ನಾಗಿ ಕೇಜ್ರಿವಾಲ್ ನೇಮಿಸಿದ್ದಾರೆ. ಸೋಮವಾರವಷ್ಟೇ ವಾಟರ್ ಟ್ಯಾಂಕರ್ ಹಗರಣ ಸಂಬಂಧ ದೆಹಲಿ ಎಸಿಬಿ ಸಿಎಂ ಕೇಜ್ರಿವಾಲ್ ಮತ್ತು ಮಾಜಿ ದೆಹಲಿ ಸಿಎಂ ಶೀಲಾ ದಿಕ್ಷಿತ್ ವಿರುದ್ಧ ಎಫ್ ಐ ಆರ್ ದಾಖಲಿಸಿದೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com