ಹಿರಿಯ ನಾಗರಿಕರಿಗೆ ಆಪ್ ಮುಖಂಡನಿಂದ ಕಪಾಳ ಮೋಕ್ಷ; ವ್ಯಾಪಕ ಟೀಕೆ

ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತನೆ ತೋರಿ ಸಾಕಷ್ಟು ವಿರೋಧಕ್ಕೆ ಒಳಗಾಗಿದ್ದ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ ಅವರು ಇದೀಗ ಹಿರಿಯ ನಾಯಕರೊಬ್ಬರಿಗೆ ಕಪಾಳ ಮೋಕ್ಷ...
ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ
ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ

ನವದೆಹಲಿ: ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತನೆ ತೋರಿ ಸಾಕಷ್ಟು ವಿರೋಧಕ್ಕೆ ಒಳಗಾಗಿದ್ದ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ ಅವರು ಇದೀಗ ಹಿರಿಯ ನಾಯಕರೊಬ್ಬರಿಗೆ ಕಪಾಳ ಮೋಕ್ಷ ಮಾಡುವ ಮೂಲಕ ಶನಿವಾರ ಮತ್ತೆ ಸುದ್ದಿಗೆ ಬಂದಿದ್ದಾರೆ.

ತುಘ್ಲಕಾಬಾದ್ ಪ್ರದೇಶವೊಂದಕ್ಕೆ ನಿನ್ನೆ ದಿನೇಶ್ ಮೊಹಾನಿಯಾ ಅವರು ಭೇಟಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದಿದ್ದ ಹಿರಿಯ ನಾಗರೀಕರೊಬ್ಬರ ಕಪಾಳಕ್ಕೆ ಇದ್ದಕ್ಕಿದ್ದಂತೆ ಹೊಡೆದಿದ್ದಾರೆಂದು ವರದಿಗಳು ತಿಳಿಸಿವೆ.

ಜನರ ಗುಂಪು ನಿಂತಿತ್ತು. ಏನಾಗಿದೆ ಎಂದು ತಿಳಿಯಲು ಸ್ಥಳಕ್ಕೆ ನಾನು ಹೋಗಿದ್ದೆ. ಈ ವೇಳೆ ದಿನೇಶ್ ಮೊಹಾನಿಯಾ ಅವರು ನನ್ನ ಕಪಾಳಕ್ಕೆ ಹೊಡೆದರು. ಅಲ್ಲದೆ, ಕೆಲ ಯುವಕರು ನನ್ನ ಕೈಯನ್ನು ಹಿಂದಕ್ಕೆ ಮುರಿದಿದ್ದರು ಎಂದು ಹಲ್ಲೆಗೊಳಗಾದ ಹಿರಿಯ ನಾಗರಿಕ ಹೇಳಿಕೊಂಡಿದ್ದಾರೆ.

ಪ್ರಸ್ತುತ ದಿನೇಶ್ ಮೊಹಾನಿಯಾ ವಿರುದ್ಧ ಗೋವಿಂದ್ ಪುರಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 323 (ಸ್ವಯಂಪ್ರೇರಿತ ಹಲ್ಲೆ), 341 (ತಪ್ಪು ಸಂಯಮ), ಮತ್ತು 34 (ಇತರೆ ವ್ಯಕ್ತಿಗಳಿಂದ ಹಲ್ಲೆ)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ದಿನೇಶ್ ಮೊಹಾನಿಯಾ ಅವರು ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ದೂರು ನೀಡಲು ಹೋಗಿದ್ದ ಮಹಿಳೆಯೊಬ್ಬರ ಬಳಿ ಅನುಚಿತವಾಗಿ ವರ್ತಿಸಿದ್ದರು. ಮೊಹಾನಿಯಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ, ಪ್ರಕರಣ ಕುರಿತು ಎಫ್ಐಆರ್ ಕೂಡ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com