ಕ್ಯಾಮೆರಾಗೆ ಪೋಸ್ ಕೊಡಲು ಹೋಗಿ ಕೆರೆಗೆ ಬಿದ್ದ ಮೇಯರ್

ಕೆರೆಯ ಕಳೆ ತೆಗೆಯುವ ಮಿಷನ್ ಮೇಲೆ ಹತ್ತಿ ಕ್ಯಾಮೆರಾ ಗೆ ಪೋಸ್ ಕೊಡಲು ಹೋಗಿ ಗೋವಾದ ಮೇಯರ್ ಕೆರೆಗೆ ಬಿದ್ದ ಘಟನೆ ನಡೆದಿದೆ...
ಸುರೇಂದ್ರ ಪುರ್ಟಡೋ
ಸುರೇಂದ್ರ ಪುರ್ಟಡೋ
Updated on: 

ಪಣಜಿ: ಕೆರೆಯ ಕಳೆ ತೆಗೆಯುವ ಮಿಷನ್ ಮೇಲೆ ಹತ್ತಿ ಕ್ಯಾಮೆರಾ ಗೆ ಪೋಸ್ ಕೊಡಲು ಹೋಗಿ ಗೋವಾದ ಮೇಯರ್ ಕೆರೆಗೆ ಬಿದ್ದ ಘಟನೆ ನಡೆದಿದೆ.

ಪಣಜಿಯ ಕೆರೆಗಳಲ್ಲಿ ಬೆಳೆದಿರುವ ಕಳೆಯನ್ನು ತೆಗೆಯಲು ಪಣಜಿ ಮಹಾನಗರ ಪಾಲಿಗೆ ಹೊಸ ಯಂತ್ರ ಖರೀದಿಸಿತ್ತು. ಇದರ ಪ್ರಾತ್ಯಕ್ಷಿಕೆ ತೋರಿಸಲು ಭಾನುವಾರ ಸ್ವತಃ ಪಣಜಿ ಮೇಯರ್‌ ಸುರೇಂದ್ರ ಅವರೇ ಕಣಕ್ಕೆ ಇಳಿದಿದ್ದರು. ಈ ಯಂತ್ರದಲ್ಲಿ ಇಬ್ಬರು ಮಾತ್ರ ಕೂರಬಹುದಿತ್ತು. ಆದರೆ ಮೇಯರ್‌ ಸಾಹೇಬ್ರು ಪತ್ರಕರ್ತರೂ ಮತ್ತು ಕೆಲ ಅಧಿಕಾರಿಗಳನ್ನು ಯಂತ್ರದ ಮೇಲೆ ಹತ್ತಿಸಿಕೊಂಡು ಫೋಟೋಕ್ಕೆ ಪೋಸ್‌ ಕೊಡುತ್ತಿದ್ದರು.

ಈ ವೇಳೆ ತೂಕ ಹೆಚ್ಚಾದ ಕಾರಣ, ಏಕಾಏಕಿ ಯಂತ್ರ ಮಗುಚಿ, ಅದರ ಮೇಲಿದ್ದವರೆಲ್ಲಾ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಅಕ್ಕಪಕ್ಕದಲ್ಲಿದ್ದವರೆಲ್ಲಾ ಕೆರೆಗೆ ಧುಮುಕಿ ಮೇಯರ್‌ ಮತ್ತು ಇತರರನ್ನು ಮೇಲಕ್ಕೆ ಎತ್ತಿದ್ದಾರೆ.

ದೇವರ ದಯೆ ಯಾವುದೇ ಅನಾಹುತವಾಗದೇ ನಾನು ಪಾರಾಗಿ ಬಂದೆ ಎಂದು ಮೇಯರ್ ಸುರೇಂದ್ರ ಪುರ್ಟಡೋ ತಿಳಿಸಿದ್ದಾರೆ. ಇನ್ನು ಮೇಯರ್ ಸೇರಿದಂತೆ ನೀರಿಗೆ ಬಿದ್ದವರ ಮೊಬೈಲ್ ಫೋನ್ ಗಳು ಹಾನಿಯಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com