ಜಾತ್ಯಾತೀತ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವುದರ ವಿರುದ್ಧ ಯೆಚೂರಿ ಎಚ್ಚರಿಕೆ

ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಭಾರತದಲ್ಲಿ ಜಾತ್ಯಾತೀತತೆ ಕಣ್ಮರೆಯಾಗಿ, ಸರ್ವಾಧಿಕಾರದ ಹಿಂದೂ ರಾಷ್ಟ್ರವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಸೀತಾರಾಮ್ ಯೆಚೂರಿ
ಸೀತಾರಾಮ್ ಯೆಚೂರಿ
Updated on: 

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ ಎಸ್ ನ್ನು ಹಿಟ್ಲರ್ ಹಾಗೂ ಆತನ ರಾಷ್ಟ್ರೀಯವಾದದ ಪರಿಕಲ್ಪನೆಗೆ ಹೋಲಿಸಿರುವ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಭಾರತದಲ್ಲಿ ಜಾತ್ಯಾತೀತತೆ ಕಣ್ಮರೆಯಾಗಿ, ಸರ್ವಾಧಿಕಾರದ ಹಿಂದೂ ರಾಷ್ಟ್ರವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕೋಲ್ಕತಾದಲ್ಲಿ ರಾಷ್ಟ್ರೀಯ ಪುಸ್ತಕ ಏಜೆನ್ಸಿಯ 77 ನೇ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸೀತಾರಾಮ್ ಯೆಚೂರಿ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಆರ್ ಎಸ್ ಎಸ್ ನ ಉದ್ದೇಶಗಳಿಗೆ ಇತ್ತೀಚಿನ ಜೆಎನ್ ಯು ವಿವಾದ, ಘರ್ ವಾಪಸಿ, ಲವ್ ಜಿಹಾದ್ ವಿವಾದಗಳ ಘಟನೆಗಳೇ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

ಹಿಟ್ಲರ್ ನ ಜರ್ಮನಿಯನ್ನು 'ಶುದ್ಧ'ಗೊಳಿಸುವ ಕಲ್ಪನೆಯಂತೆಯೇ ಆರ್ ಎಸ್ ಎಸ್ ಸಹ ಭಾರತವನ್ನು ಹಿಂದುಗಳ ರಾಷ್ಟ್ರವನ್ನಾಗಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಇನ್ನು ದೇಶದ ಆರ್ಥಿಕತೆ, ಎಫ್ ಡಿ ಐ ಬಗ್ಗೆಯೂ ಮಾತನಾಡಿರುವ ಸೀತಾರಾಮ್ ಯೆಚೂರಿ, ಮೋದಿ ಸರ್ಕಾರ ಸುಳ್ಳು ಅಂಕಿ-ಅಂಶಗಳನ್ನು ಜನರ ಮುಂದಿಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಗರಿಷ್ಠ ಲಾಭ ಮಾಡಿಕೊಳ್ಳಲು ಅವಕಾಶ ಪಡೆಯಲು ಭಾರತದಲ್ಲಿ ಹಿಟ್ಲರ್ ಮನಸ್ಥಿತಿಯ ನಾಯಕನಿಗಾಗಿ ಎದುರುನೋಡುತ್ತಿದ್ದವು.

ಆಗಲೇ ಅವರಿಗೆ ಮೋದಿ ಸಿಕ್ಕಿದ್ದು, ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅಮೆರಿಕಾಗೆ ಹೆಚ್ಚಿನ ಪ್ರವಾಸ ಕೈಗೊಂಡಿದ್ದು ರಕ್ಷಣಾ ಕ್ಷೇತ್ರ ಸೇರಿದಂತೆ ಎಲ್ಲವೂ ಎಫ್ ಡಿಐ ಗೆ ತೆರೆದುಕೊಳ್ಳುವಂತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸರ್ವಾಧಿಕಾರಿ ಧೋರಣೆಯ ವಿರುದ್ಧ ಬೌದ್ಧಿಕ ಪ್ರತಿರೋಧ ತೋರಬೇಕಿದೆ ಎಂದು ಯೆಚೂರಿ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com