ಈ ಹಿಂದೆ ಟಿಕೆಟ್‌ಗಳಿಗೆ 24 ಗಂಟೆಗಳ ಕಾಲಾವಧಿಯಿತ್ತು. ಅದನ್ನೇ ಈಗ ಮೂರು ಗಂಟೆಗಳಾಗಿ ಕಡಿತಗೊಳಿಸಲಾಗಿದೆ. ಮೂರು ಗಂಟೆಗಳ ಅವಧಿ ನಡುವೆ ಪ್ರಯಾಣ ಮಾಡದೇ ಇದ್ದರೆ ಮತ್ತೆ ಹೊಸ ಟಿಕೆಟ್ ಪಡೆಯಬೇಕಾಗುತ್ತದೆ. ಟಿಕೆಟ್ ಪಡೆದ ನಂತರ ಮೂರು ಗಂಟೆಗಳಲ್ಲಿ ಯಾವುದೇ ರೈಲು ಬರದೇ ಇದ್ದರೆ, ಅನಂತರ ಬರುವ ರೈಲಿನ ಸಮಯಕ್ಕೆ ಅನುಸಾರವಾಗಿ ಟಿಕೆಟ್‌ನ ಕಾಲಾವಧಿ ವಿಸ್ತರಿಸಲ್ಪಡುತ್ತದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.